ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಲೆಸ್ ಮೇಲಿನ ಅಬಕಾರಿ ಸುಂಕದಲ್ಲಿ ಕಡಿತ ಮಾಡಿದ್ದು, ಪೆಟ್ರೋಲ್ ಮೇಲಿನ ಅಬಕಾರಿ ಸುಂಕದಲ್ಲಿ 5 ರೂ ಕಡಿಮೆ ಡೀಸೆಲ್ ಮೇಲಿನ ಸುಂಕದಲ್ಲಿ 10 ರೂ ಕಡಿತಗೊಳಿಸಿದೆ. ನಾಳೆ ಸಂಜೆಯಿಂದಲೇ ಈ ಹೊಸ ದರಗಳು ಜಾರಿಗೆ ಬರಲಿದೆ. ನಂತರ ವ್ಯಾಟ್ (VAT) ಕಡಿಮೆಗೊಳಿಸಲು ರಾಜ್ಯಗಳಿಗೆ ಕೇಂದ್ರ ಮನವಿ ಮಾಡಿದ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನ ತಲಾ 7 ರೂ.ಗಳಷ್ಟು ಇಳಿಕೆ ಮಾಡಿದೆ.
ಪೆಟ್ರೋಲ್ ಮೇಲೆ ಅಬಕಾರಿ ಸುಂಕದಲ್ಲಿ 5 ರೂ ಹಾಗೂ VAT ನಲ್ಲಿ 7 ರೂ ಹೀಗೆ ಒಟ್ಟು 12 ರೂ ಬೆಲೆ ಕಡಿತ ಆಗಿದೆ. ಡೀಸೆಲ್ ಬೆಲೆಯಲ್ಲಿ ಅಬಕಾರಿ ಸುಂಕದಲ್ಲಿ 10 ರೂ, ವ್ಯಾಟ್ನಲ್ಲಿ 7 ರೂ ಹೀಗೆ 17 ರೂ ಇಳಿಕೆಯಾಗಿದೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಈ ವಿಷಯ ತಿಳಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 95.50 ರೂ.ಗಳಾಗಲಿದೆ ಹಾಗೂ ಡೀಸೆಲ್ ಬೆಲೆ 81.50 ರೂ.ಗಳಿಗೆ ಇಳಿಯುವ ನಿರೀಕ್ಷೆ ಇದೆ.
ದೀಪಾವಳಿ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಡೀಸೆಲ್ ಮೇಲೆ 10 ರೂ ಹಾಗೂ ಪೆಟ್ರೋಲ್ 5 ರೂ ಕಡಿಮೆಗೊಳಿಸಿದೆ. ಕರ್ನಾಟಕ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ತಲಾ 7 ರೂ ಕಡಿಮೆಗೊಳಿಸಲು ನಿರ್ಧರಿಸಿದೆ. ಈ ನಮ್ಮ ನಿರ್ಧಾರದಿಂದ ರಾಜ್ಯ ಸರ್ಕಾರಕ್ಕೆ ಅಂದಾಜು 2100 ಕೋಟಿ ರೂ.ಗಳಷ್ಟು ಕೆಎಸ್ಟಿಯಿಂದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ರಾಜ್ಯ ಸರ್ಕಾರದ ಈ ನಿರ್ಧಾರ ನಾಳೆ ಸಾಯಂಕಾಲದಿಂದ ಅನ್ವಯ ಆಗಲಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರಾಜ್ಯದ ಜನತೆಗೆ ದೀಪಾವಳಿಯ ಉಡುಗೊರೆ ಎಂದು”ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ಗಳಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆಗೊಳಿಸಲು ನಿರ್ಧರಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರಗಳಿಗೆ ವ್ಯಾಟ್ (VAT- ಮೌಲ್ಯ ವರ್ಧಿತ ತೆರಿಗೆ) ತೆರಿಗೆ ಕಡಿಮೆಗೊಳಿಸಿ ಎಂದು ಮನವಿ ಮಾಡಿದ ಬೆನ್ನಲ್ಲೇ ಕರ್ನಾಟಕದಲ್ಲಿ ಈ ಬೆಳವಣಿಗೆ ಬಂದಿದೆ.
ಬೆಂಗಳೂರಿನಲ್ಲಿರುವ ಈಗಿರುವ ಪೆಟ್ರೋಲ್ ಬೆಲೆ: 113.93 ರೂ
ಬದಲಾಗಲಿರುವ ಪೆಟ್ರೋಲ್ ಬೆಲೆ: 95.50 ರೂ.
ಈಗಿರುವ ಡೀಸೆಲ್ ಬೆಲೆ: 104.50
ಬದಲಾಗಲಿರುವ ಡೀಸೆಲ್ ಬೆಲೆ: 81.50 ರೂ
ಕಳೆದ ವರ್ಷ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 19.98 ರೂ.ಗಳಿಂದ ಇಂದ 32.90 ರೂಗೆ ಕೇಂದ್ರ ಸರ್ಕಾರ ಏರಿಕೆ ಮಾಡಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ