ಕೊರೊನಾ ಪ್ರಕರಣಗಳ ಇಳಿಮುಖ: ರಾಜ್ಯದಲ್ಲಿ ನೈಟ್‌ ಕರ್ಫ್ಯೂʼ ಹಿಂಪಡೆದ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂವನ್ನು ಹಿಂಪಡೆದಿದೆ.
ಕೊರೊನಾ ಎರಡನೇ ಅಲೆಯ ವೇಳೆ ಜನರನ್ನು ಕೋವಿಡ್ ಸೋಂಕಿನಿಂದ ರಕ್ಷಿಸಲು ಹಾಗೂ ಕೋವಿಡ್‌ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಹಲವಾರು ನಿಯಮಗಳನ್ನು ಜಾರಿಗೊಳಿಸಿತ್ತು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆ ವರೆಗೂ ರಾಜ್ಯದಲ್ಲಿ ನೈರ್ಟ್ ಕರ್ಫ್ಯೂವನ್ನು ವಿಧಿಸಿತ್ತು.
ಇದೀಗ ಕೊರೊನಾ ಪ್ರಕರಣಗಳು ಇಳಿಕೆಯಾಗಿರುವ ಹಿನ್ನೆಲೆ ರಾಜ್ಯದಲ್ಲಿ ವಿಧಿಸಿದ್ದ ನೈಟ್ ಕರ್ಫ್ಯೂವನ್ನು ಸರ್ಕಾರ ಹಿಂಪಡೆದುಕೊಂಡಿದೆ.
ಜೊತೆಗೆ ಕುದುರೆ ರೇಸ್ ನಡೆಸಲು ಸಹ ಸರ್ಕಾರ ಅನುಮತಿ ನೀಡಿದೆ. ಕುದುರೆ ರೇಸ್‍ನಲ್ಲಿ ಭಾಗವಹಿಸುವವರು 2 ಡೋಸ್ ಕೊರೊನಾ ಲಸಿಕೆ ಪಡೆದಿರಬೇಕೆಂದು ಸೂಚಿಸಿದೆ. ಸ್ಥಳಾವಕಾಶದ ಸಾಮರ್ಥ್ಯದಷ್ಟು ಕುದುರೆಗಳಿಗೆ ಮಾತ್ರ ರೇಸ್‍ಗೆ ಅನುಮತಿ ನೀಡಲಾಗಿದ್ದು, ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ನಿಯಮಗಳ ಕಡ್ಡಾಯವಾಗಿ ಪಾಳಿಸಲು ಸೂಚಿಸಲಾಗಿದೆ.

 

ನಿಮ್ಮ ಕಾಮೆಂಟ್ ಬರೆಯಿರಿ

advertisement