ಭಾರತ- ನ್ಯೂಜಿಲೆಂಡ್ ಟೆಸ್ಟ್ ಸರಣಿ: ಟ್ರೆಂಟ್ ಬೌಲ್ಟ್, ಗ್ರಾಂಡ್‌ಹೋಮ್ ಇಲ್ಲದ 15 ಸದಸ್ಯರ ನ್ಯೂಜಿಲೆಂಡ್ ತಂಡ ಪ್ರಕಟ

ನವದೆಹಲಿ: ಆತಿಥೇಯ ಭಾರತ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ಗುರುವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮೊದಲ ಟೆಸ್ಟ್ ಕಾನ್ಪುರದಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಡಿಸೆಂಬರ್ 3 ರಿಂದ ಮುಂಬೈನಲ್ಲಿ ನಡೆಯಲಿದೆ.
ಕೇನ್ ವಿಲಿಯಮ್ಸನ್ ತಂಡದ ನಾಯಕರಾಗಿದ್ದು, ಟೆಸ್ಟ್ ಸ್ಪಿನ್ನರ್ ರಚಿನ್ ರವೀಂದ್ರ ನವೆಂಬರ್ 25 ರಿಂದ ನಡೆಯಲಿರುವ ಸರಣಿಯಲ್ಲಿ ಪಾದಾರ್ಪಣೆ ಮಾಡಬಹುದಾಗಿದೆ.
ವೇಗಿ ಟ್ರೆಂಟ್ ಬೌಲ್ಟ್ ಮತ್ತು ಆಲ್-ರೌಂಡರ್ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಅವರು ಬಯೋ-ಬಬಲ್ ಆಯಾಸದಿಂದಾಗಿ ತಮ್ಮನ್ನು ತಾವು ಅಲಭ್ಯ ಎಂದು ತಿಳಿಸಿದ್ದರಿಂದ ತಂಡದಲ್ಲಿ ಇಲ್ಲ.

ರವೀಂದ್ರರ ಹೊರತಾಗಿ, ತಂಡ ಇನ್ನೂ ನಾಲ್ಕು ಸ್ಪಿನ್ನರ್‌ಗಳನ್ನು ಸೇರಿಸಲು ನಿರ್ಧರಿಸಿದೆ; ಅಜಾಜ್ ಪಟೇಲ್, ವಿಲ್ ಸೋಮರ್ವಿಲ್ಲೆ, ಮಿಚೆಲ್ ಸ್ಯಾಂಟ್ನರ್ ಸೇರಿದಂತೆ. ವಿಕೆಟ್ ಕೀಪರ್ ಗ್ಲೆನ್ ಫಿಲಿಪ್ಸ್ ಅವರನ್ನು ಸ್ಪಿನ್ನರ್ ಆಗಿ ತಂಡಕ್ಕೆ ಸೇರಿಸಲಾಗಿದೆ.
ವಿಲಿಯಮ್ಸನ್, ರಾಸ್ ಟೇಲರ್, ಡೆವೊನ್ ಕಾನ್ವೇ, ಟಾಮ್ ಲ್ಯಾಥಮ್, ಹೆನ್ರಿ ನಿಕೋಲ್ಸ್, ವಿಲ್ ಯಂಗ್ ಅವರು ತಂಡದಲ್ಲಿ ಬ್ಯಾಟರ್ ಆಗಿದ್ದರೆ, ಟಾಮ್ ಬ್ಲಂಡೆಲ್ ಅವರನ್ನು ಸರಣಿಯ ವಿಕೆಟ್ ಕೀಪರ್ ಎಂದು ಹೆಸರಿಸಲಾಗಿದೆ.
ತಂಡದಲ್ಲಿರುವ ವೇಗಿಗಳು ಆಲ್ ರೌಂಡರ್ ಕೈಲ್ ಜೇಮಿಸನ್, ಟಿಮ್ ಸೌಥಿ, ನೀಲ್ ವ್ಯಾಗ್ನರ್.
ತಂಡ ಇಂತಿದೆ: ಕೇನ್ ವಿಲಿಯಮ್ಸನ್ (c), ಟಾಮ್ ಬ್ಲಂಡೆಲ್ (WK), ಡೆವೊನ್ ಕಾನ್ವೇ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ವಿಲ್ ಸೋಮರ್ವಿಲ್ಲೆ, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್

ಪ್ರಮುಖ ಸುದ್ದಿ :-   50 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ : ಮಕ್ಕಳನ್ನು ಮನೆಗೆ ಕಳುಹಿಸಿದ ಶಾಲೆಗಳು, ಪರೀಕ್ಷೆಗಳು ಸ್ಥಗಿತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement