ಮೈಸೂರು ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂಕುಸಿತ…!

ಮೈಸೂರು: ಚಾಮುಂಡಿ ಬೆಟ್ಟದಲ್ಲಿಂದು ಮತ್ತೆ ಭೂಕುಸಿತವಾಗಿದೆ. ಹದಿನೈದು ದಿನಗಳ ಅಂತರದಲ್ಲಿ ನಂದಿ ಬೆಟ್ಟಕ್ಕೆ ಹೋಗುವ ರಸ್ತೆ ಮತ್ತೆ ಕುಸಿದಿದೆ.
ಗುರುವಾರ ರಾತ್ರಿ ಸುರಿದಂತ ಭಾರಿ ಮಳೆಯಿಂದಾಗಿ ಮತ್ತೆ ಚಾಮುಂಡಿ ಬೆಟ್ಟದ ( Chamundi Hills ) ಹೊಸ ನಂದಿ ರಸ್ತೆ ಮತ್ತೆ ಕುಸಿತಗೊಂಡಿದೆ.
ಮಳೆಯಿಂದಾಗಿ ಹದಿನೈದು ದಿನಗಳ ಹಿಂದೆ ಚಾಮುಂಡಿಬೆಟ್ಟದ ರಸ್ತೆ ಕುಸಿತಗೊಂಡಿತ್ತು. ಈ ಭಾಗವನ್ನು ಮಣ್ಣಿನ ಗುಡ್ಡೆಯನ್ನು ಹಾಕಿ ಸರಿಪಡಿಸಲಾಗಿತ್ತು. ಆದರೆ ಭಾರಿ ಮಳೆಯಿಂದಾಗಿ ಭಾರಿ ಪ್ರಮಾಣದಲ್ಲಿ ಮಣ್ಣು ಕೆಳಗಿನ ಹಳೆಯ ನಂದಿ ರಸ್ತೆ ವರೆಗೆ ಬಂದಿದೆ. ಈಗ ಮತ್ತೊಂದು ಭಾಗವೂ ಕುಸಿದಿದ್ದು, ಇಡೀ ರಸ್ತೆಯಲ್ಲಿ ಬಿರುಕುಗಳು ಉಂಟಾಗಿವೆ.
ಈ ಕುರಿತು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಾಹಿತಿ ನೀಡಿದ್ದು, ಶುಕ್ರವಾರ ಸುರಿದಂತೆ ಮಳೆಯಿಂದಾಗಿ ಮೂರು ಕಡೆ ರಸ್ತೆ ಕುಸಿತಗೊಂಡಿದೆ. ಈ ರಸ್ತೆಯಲ್ಲಿ ನಡೆದಾವುದು ಸಹ ಅಪಾಯಕಾರಿ. ಮಳೆ ಮುಂದುವರಿದರೆ ಮತ್ತಷ್ಟು ರಸ್ತೆ ಕುಸಿಯೋ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಇಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ತಜ್ಞರ ತಂಡ ಸ್ಥಳ ಪರಿಶೀಲನೆ ಮಾಡಲಿದೆ ಎನ್ಮಲಾಗಿದ್ದು, ಮಣ್ಣಿನ ಸಾಂದ್ರತೆ, ಹೊಸ ತಂತ್ರಜ್ಞಾನದೊಂದಿಗೆ ಕೈಗೊಳ್ಳಬಹುದಾದ ದುರಸ್ತಿ ಕಾರ್ಯ ಕುರಿತು ತಜ್ಞರು ಭೂ ವಿಜ್ಞಾನಿಗಳು ವರದಿ ನೀಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಪ್ರಮುಖ ಸುದ್ದಿ :-   ತುಮಕೂರು : ಲಾಡ್ಜ್‌ನಲ್ಲಿ ದಾವಣಗೆರೆ ಪಿಎಸ್ಐ ಆತ್ಮಹತ್ಯೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement