ಕುಮಟಾ: ಹೊಸ ಹೆರವಟ್ಟಾ ಬಳಿ ಗಟಾರಕ್ಕೆ ಬಿದ್ದ ಬೈಕ್‌, ಇಬ್ಬರ ಸಾವು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಸ ಹೆರವಟ್ಟಾ ಬಳಿ ಬೈಕ್‌ ಸ್ಕಿಡ್‌ ಆಗಿ ಗಟಾರಕ್ಕೆ ಬಿದ್ದ ಪರಿಣಾಮ ಇಬ್ಬರು ಸವಾರರು ಮೃತಪಟ್ಟ ಘಟನೆ ನಡೆದ ಶುಕ್ರವಾರ ಸಂಜೆ ನಡೆದ ಬಗ್ಗೆ ವರದಿಯಾಗಿದೆ.
ತಾಲೂಕಿನ ಹೊಸಹೆರವಟ್ಟಾ ಬಳಿ ಬೈಕ್ ಸವಾರನೋರ್ವ ಬೈಕನ್ನು ಅತಿ ವೇಗವಾಗಿ ಚಲಾವಣೆ ಮಾಡುತ್ತಿದ್ದಾಗ ನಿಯಂತ್ರಣಕ್ಕೆ ಬಾರದೆ ಬೈಕ್‌ ಸ್ಕಿಡ್‌ ಆಗಿ ಹೆದ್ದಾರಿಯ ಪಕ್ಕದಲ್ಲಿರುವ ಗಟಾರದಲ್ಲಿ ಬಿದ್ದಿದೆ. ಬಿದ್ದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಬೈಕ್ ಸವಾರ ಹಾಗೂ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರನ್ನು ಬೈಕ್ ಸವಾರ ನಾಗರಾಜ ಮಂಜುನಾಥ ಮಡಿವಾಳ ಹಾಗೂ ಹಿಂಬದಿಯಲ್ಲಿ ಕುಳಿತಿದ್ದ ಸಂಜಯ ಪಾಂಡುರಂಗ ಪಾವಸ್ಕರ್ ಎಂದು ಗುರುತಿಸಲಾಗಿದೆ.
ಇವರಿಬ್ಬರು ಬೈಕಿನಲ್ಲಿ ಕುಮಟಾ ಕಡೆಯಿಂದ ಚಂದಾವರ ಕಡೆಗೆ ಹೋಗುತ್ತಿದ್ದರು ಎಂದು ವರದಿಯಾಗಿದೆ. ಸಂದರ್ಭದಲ್ಲಿ ಹೆದ್ದಾರಿಯ ಪಕ್ಕದಲ್ಲಿ ಬೈಕ್ ಗಟಾರಕ್ಕೆ ಬಿದ್ದಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement