ಅಹಮದಾಬಾದ್: ಪಾಕಿಸ್ತಾನಿ ನೌಕಾಪಡೆ ನೀಚ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಭಾರತಕ್ಕೆ ಸೇರಿದ್ದ ದೋಣಿಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಓರ್ವ ಭಾರತೀಯ ಮೀನುಗಾರ ಸಾವಿಗೀಡಾಗಿದ್ದಾನೆ ಹಾಗೂ ಮತ್ತೋರ್ವ ಗಾಯಗೊಂಡಿದ್ದಾರೆ.
ಗುಜರಾತಿನ ದ್ವಾರಕಾ ಸಮುದ್ರ ಪ್ರದೇಶದಲ್ಲಿ ಪಾಕ್ ನೌಕಾಪಡೆ ಈ ದುಸ್ಸಾಹಸಕ್ಕೆ ಕೈ ಹಾಕಿದೆ. ಪಾಕ್ ಪಡೆಗಳು ಗುಂಡಿನ ದಾಳಿ ನಡೆಸಿದ ಭಾರತೀಯ ದೋಣಿಯ ಹೆಸರು ‘ಜಲ್ ಪಾರಿ’ ಎಂದು ಗೊತ್ತಾಗಿದೆ.
ಮೃತಪಟ್ಟ ವ್ಯಕ್ತಿಯ ದೇಹವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಇನ್ನು ಗಾಯಗೊಂಡಿರುವ ವ್ಯಕ್ತಿಯನ್ನು ದ್ವಾರಕಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಕಿಸ್ತಾನ ನೌಕಾಪಡೆ ದಾಳಿ ನಡೆಸಿದಾಗ ಜಲ್ ಪಾರಿ ದೋಣಿ, ಭಾರತೀಯ ಗಡಿಯೊಳಗೆ ಇತ್ತು. ಆದರೂ ಸಹ ದಾಳಿ ಮಾಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ