ಒಂದು ಕೋಟಿ ಝೈಕೊವ್​-ಡಿ ಲಸಿಕೆ ಖರೀದಿಗೆ ಆದೇಶ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಕೊರೊನಾ ವೈರಸ್​ ವಿರುದ್ಧ ಭಾರತವು ದೇಶೀಯವಾಗಿ ರೂಪಿಸಿರುವ 2ನೇ ಲಸಿಕೆ ಝೈಕೊವ್​-2ಡಿ ಲಸಿಕೆ ಖರೀದಿಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಒಂದು ಕೋಟಿ ಲಸಿಕೆಗಳನ್ನು ಪೂರೈಸುವಂತೆ ಕಂಪನಿಗೆ ಬೇಡಿಕೆಯಿಟ್ಟಿದೆ. ಅಲ್ಲದೆ, ದೇಶಾದ್ಯಂತ ನಡೆಯುತ್ತಿರುವ ಲಸಿಕೆ ಅಭಿಯಾನದಲ್ಲಿಯೂ ಇದನ್ನು ಸೇರಿಸಿಕೊಳ್ಳಲು ನಿರ್ಧರಿಸಿದೆ. ಸೂಜಿಯಿಲ್ಲದೆ ಔಷಧವನ್ನು ದೇಹಕ್ಕೆ ಸೇರುವ ಈ ಲಸಿಕೆಗೆ ಕಳೆದ ಆಗಸ್ಟ್​ 20ರಂದು ಭಾರತದ ಔಷಧ ಮಹಾನಿಯಂತ್ರಕರ ಅನುಮೋದನೆ (Drugs Controller General of India – DCGI) ಪಡೆದುಕೊಂಡಿತ್ತು.
12ರಿಂದ 18 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡಬಹುದು ಎಂದು ಡಿಸಿಜಿಐ ಅನುಮೋದನೆ ನೀಡಿದ್ದರೂ, ಆರಂಭದಲ್ಲಿ ಲಸಿಕೆಯನ್ನು ಕೇವಲ ವಯಸ್ಕರಿಗೆ ಮಾತ್ರ ನೀಡಲಾಗುತ್ತದೆ. ಝೈಕೊವ್​-ಡಿ ಲಸಿಕೆಯ ಪ್ರತಿ ಡೋಸ್​ಗೆ 358 ರೂ.ಗಳಷ್ಟು ದರ ನಿಗದಿಪಡಿಸಲಾಗಿದೆ.
ಕಂಪನಿಯ ಉತ್ಪಾದನಾ ಸಾಮರ್ಥ್ಯ ಸೀಮಿತವಾಗಿದೆ. ಪ್ರತಿ ತಿಂಗಳು 1 ಕೋಟಿ ಲಸಿಕೆ ಡೋಸ್​ಗಳನ್ನು ಮಾತ್ರವೇ ನೀಡಲು ಕಂಪನಿಗೆ ಸಾಧ್ಯವಿದೆ. ಹೀಗಾಗಿ ಮೊದಲು ವಯಸ್ಕರಿಗೆ ಮಾತ್ರವೇ ಲಸಿಕೆ ನೀಡಲು ನಿರ್ಧರಿಸಲಾಯಿತು ಎಂದುಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.
ಇದು ವಿಶ್ವದ ಮೊದಲ ಡಿಎನ್​ಎ ಆಧರಿತ ಮೂರು ಹಂತದಲ್ಲಿ ತೆಗೆದುಕೊಳ್ಳುವ ಲಸಿಕೆಯಾಗಿದ್ದು, ಮೊದಲ ಲಸಿಕೆ ತೆಗೆದುಕೊಂಡ 28 ಮತ್ತು 56ನೇ ದಿನಕ್ಕೆ ಕ್ರಮವಾಗಿ ಎರಡು ಮತ್ತು ಮೂರನೇ ಲಸಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಈವರೆಗೆ ಭಾರತದಲ್ಲಿ ಒಟ್ಟು ತುರ್ತು ಬಳಕೆ ಅನುಮೋದನೆ (Emergency Use Authorisation – EUA) ಪಡೆದುಕೊಂಡ ಲಸಿಕೆಯಲ್ಲಿ ಇದರಲ್ಲಿ ಝೈಕೊವ್-ಡಿ 6ನೆಯದ್ದಾಗಿದೆ ಎಂದು ಔಷಧ ನಿಯಂತ್ರಕರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement