ಮಾರಾಟದಲ್ಲಿ ಹೊಸ ದಾಖಲೆ ಬರೆದ ‘ಟಗರು’ : ಈ ಟಗರಿನ ಬೆಲೆ ಕೇಳಿದ್ರೆ ದಂಗಾಗ್ತೀರಾ..!

ಮಂಡ್ಯ: ಎತ್ತುಗಳು ದಾಖಲೆಯ ಬೆಲೆಯಲ್ಲಿ ಮಾರಾಟವಾಗಿದ್ದನ್ನು ಕೇಳಿದ್ದೇವೆ. ಇಲ್ಲೊಂದು ಟಗರು ದಾಖಲೆ ಬೆಲೆಗೆ ಮಾರಾಟವಾಗಿದೆ. ಮಾರಾಟದಲ್ಲಿ ಅದು ಹೊಸ ದಾಖಲೆಯನ್ನೇ ಬರೆದಿದೆ…!
ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿಪುರದಲ್ಲಿ 1.91 ಲಕ್ಷ ರೂ.ಗಳಿಗೆ ಬಂಡೂರು ಟಗರು ಮಾರಾಟವಾಗಿದೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿಪುರ ಗ್ರಾಮದ ಸಣ್ಣಪ್ಪ ಎಂಬುವರು 2 ವರ್ಷದ ಹಿಂದೆ ಬಂಡೂರು ಟಗರೊಂದನ್ನು
1 ಲಕ್ಷದ 5 ಸಾವಿರಕ್ಕೆ ಖರೀದಿಸಿ ತಂದಿದ್ದರು. ಈ ಟಗರನ್ನು ಇಂದು ಮಾರಾಟಕ್ಕೆ ಇಟ್ಟಿದ್ದರು. ಇದನ್ನು ಬಿದರಕೋಟೆಯ ಕೃಷ್ಣಪ್ಪ ಎಂಬುವರ 1 ಲಕ್ಷದ 91 ಸಾವಿರ ರೂಪಾಯಿಗೆ ಖರೀದಿಸಿದ್ದಾರೆ. ಈ ಮೂಲಕ ಟಗರು ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ.
ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿಪುರದಲ್ಲಿ 1.91 ಲಕ್ಷ ರೂ.ಗಳಿಗೆ ಬಂಡೂರು ಟಗರು ಮಾರಾಟವಾಗಿದೆ. ದೇವಿಪುರದ ಸಣ್ಣಪ್ಪ ಎಂಬುವರು ಸಾಕಿದ್ದ ಬಂಡೂರು ಟಗರನ್ನು 1.91ಲಕ್ಷ ರೂ.ಗಳಿಗೆ ಬಿದರಕೋಟೆ ಕೃಷ್ಣಪ್ಪ ಎಂಬುವರು ಖರೀದಿಸಿದ್ದಾರೆ. ಸಣ್ಣಪ್ಪ 2 ವರ್ಷದ ಹಿಂದೆ ಈ ಟಗರನ್ನು 1 ಲಕ್ಷ 5 ಸಾವಿರ ರೂ.ಗೆ ಖರೀದಿಸಿದ್ದರು. ಅದೇ ಟಗರನ್ನು ಈಗ ಬರೋಬ್ಬರಿ 1 ಲಕ್ಷ 91 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಬಂಡೂರು ಟಗರಿಗೆ ರೈತ ಸಣ್ಣಪ್ಪ ಹಾರ ಹಾಕಿ, ಪೂಜೆ ಸಲ್ಲಿಸಿದ್ದಾರೆ. ನಂತರ ದೇವಿಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಟಗರಿನ ಮೆರವಣಿಗೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಶಿರಸಿ : ಜುಲೈ 13ಕ್ಕೆ ಕರ್ಮಫಲ ಕಾದಂಬರಿ ಲೋಕಾರ್ಪಣೆ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement