ಮಹಾರಾಷ್ಟ್ರ ಸಚಿವ ನವಾಬ್​ ಮಲ್ಲಿಕ್​ ವಿರುದ್ಧ 1.25 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸಮೀರ್​ ವಾಂಖೇಡೆ ತಂದೆ

ಮುಂಬೈ: ಮಾದಕ ದ್ರವ್ಯ ನಿಯಂತ್ರಣ ಮಂಡಳಿ (ಎನ್​ಸಿಬಿ) ವಲಯ ನಿರ್ದೇಶಕ ಸಮೀರ್​ ವಾಂಖೇಡೆ ತಂದೆ ಧ್ಯಾನದೇವ್ ಕಚ್ರುಜಿ ವಾಂಖೇಡೆ ಅವರು ಮಹಾರಾಷ್ಟ್ರ ಸಚಿವ ನವಾಬ್​ ಮಲ್ಲಿಕ್​ ವಿರುದ್ಧ ಬಾಂಬೆ ಹೈಕೋರ್ಟ್​​​ನಲ್ಲಿ 1.25 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಅವರ ಪುತ್ರ ಹಾಗೂ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್​ ವಾಂಖೇಡೆ ಕಳೆದ ತಿಂಗಳು ಶಾರುಖ್​ ಖಾನ್​ ಪುತ್ರ ಆರ್ಯನ್​​​ ಖಾನ್‌ ಬಂಧಿಸಿದಾಗಿನಿಂದಲೂ ಸುದ್ದಿಯಲ್ಲಿದ್ದಾರೆ. ಸದ್ಯ ಅವರನ್ನು ಆರ್ಯನ್​ ಖಾನ್​ ಕೇಸ್​ ಸೇರಿ ಎಲ್ಲ ಕೇಸ್​ಗಳಿಂದಲೂ ತೆರವುಗೊಳಿಸಲಾಗಿದ್ದು ಅವರ ಜಾಗಕ್ಕೆ ಐಪಿಎಸ್​ ಅಧಿಕಾರಿ ಸಂಜಯ್​ ಕುಮಾರ್​​ರನ್ನು ನೇಮಕ ಮಾಡಲಾಗಿದೆ.
ವಾಂಖೇಡೆ ವಕೀಲ ಪರ ಅರ್ಷದ್ ಶೇಖ್ ಮಾನನಷ್ಟ ಮೊಕದ್ದಮೆ ಹೂಡಿದ್ದು, ನವಾಬ್​ ಮಲ್ಲಿಕ್​ ಅವರು, ಸಮೀರ್​ ವಾಂಖೇಡೆ ಕುಟುಂಬವನ್ನು ವಂಚಕ ಕುಟುಂಬ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ, ಅವರ ಧಾರ್ಮಿಕ ನಂಬಿಕೆಯನ್ನೇ ಪ್ರಶ್ನಿಸಿದ್ದಾರೆ. ವಾಂಖೇಡೆ ಕುಟುಂಬ ಹಿಂದೂಗಳಲ್ಲ ಎಂದು ಹೇಳಿದ್ದಾರೆ. ಅವರ ಇಡೀ ಕುಟುಂಬದ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಸಮೀರ್​ ವಾಂಖೇಡೆ ಕುಟುಂಬದ ಗೌರವ, ಸಾಮಾಜಿಕ ಗೌರವ, ಅವರೆಲ್ಲರ ಹೆಸರಿಗೆ ಹಾನಿ ಉಂಟು ಮಾಡಿದ್ದಾರೆ. ಇದು ಸರಿಪಡಿಸಲಾಗದ ನಷ್ಟವಾಗಿದೆ ಎಂದೂ ಮೊಕದ್ದಮೆಯಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ನವಾಬ್​ ಮಲ್ಲಿಕ್​ ಆಗಲೀ, ಅವರ ಪಕ್ಷದ ಇತರ ಸದಸ್ಯರಾಗಲೀ ತಮ್ಮ ಕುಟುಂಬದ ವಿರುದ್ಧ ಮಾತನಾಡುವುದನ್ನು ಶಾಶ್ವತವಾಗಿ ನಿಲ್ಲಿಸಬೇಕು. ಅವರಿಗೆ ಹಾಗೆ ಸೂಚನೆ ನೀಡಬೇಕು ಎಂದು ಧ್ಯಾನ್​ದೇವ್​ ಬಯಸುತ್ತಾರೆ ಎಂದು ಮಾನನಷ್ಟ ಮೊಕದ್ದಮೆಯಲ್ಲಿ ತಿಳಿಸಲಾಗಿದೆ.
ಅದಿಷ್ಟೇ ಅಲ್ಲ, ಈಗಾಗಲೇ ಟಿವಿ, ಪತ್ರಿಕೆಗಳಲ್ಲಿ ಪ್ರಕಟವಾದ ನವಾಬ್​ ಮಲ್ಲಿಕ್​ ತಮ್ಮ ಬಗ್ಗೆ ಮಾಡಿರುವ ಆರೋಪದ ಸಂಬಂಧ ಲೇಖನಗಳು, ಟ್ವೀಟ್​ಗಳು, ಸಂದರ್ಶನಗಳನ್ನು ಡಿಲೀಟ್ ಮಾಡಬೇಕು. ಹಾಗೇ, ಈಗ ಬಾಕಿ ಉಳಿದಿರುವ ಮೊಕದ್ದಮೆಯ ಅಂತಿಮ ತೀರ್ಪು ಬರುವವರೆಗೂ ಯಾವುದೇ ಮಾಧ್ಯಮದಲ್ಲಿ ಈ ಬಗ್ಗೆ ಪ್ರಕಟಿಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬೇಕು. ಈ ಸಂಬಂಧ ಕೋರ್ಟ್​ ಸೂಚನೆ ನೀಡಬೇಕು ಎಂದು ಧ್ಯಾನ್​ದೇವ್​ ಮನವಿ ಮಾಡಿದ್ದಾರೆ.
ಈ ವರ್ಷದ ಜನವರಿಯಲ್ಲಿ ಮಲಿಕ್ ಅವರ ಅಳಿಯ ಸಮೀರ್ ಖಾನ್ ಅವರನ್ನು ನಿಷೇಧಿತ ಡ್ರಗ್ಸ್‌ ಮಾರಾಟದ ಆರೋಪದ ಮೇಲೆ ಎನ್‌ಸಿಬಿ ಬಂಧಿಸಿದ ನಂತರವೇ ವಾಂಖೆಡೆಸ್ ವಿರುದ್ಧ ಆರೋಪ ಪ್ರಾರಂಭವಾಯಿತು ಎಂದು ಮೊದ್ದಮೆಯಲ್ಲಿ ತಿಳಿಸಲಾಗಿದೆ.
ಸೆಪ್ಟೆಂಬರ್‌ನಲ್ಲಿ ಖಾನ್‌ಗೆ ಜಾಮೀನು ನೀಡಲಾಯಿತು ಮತ್ತು ಅಂದಿನಿಂದ ಮಲಿಕ್ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ಪ್ರತಿದಿನ ಮಾತನಾಡುತ್ತಿದ್ದಾರೆ ಅಥವಾ ಈ ವಿಷಯದ ಕುರಿತು ಪತ್ರಿಕಾಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.
ವಾಂಖೇಡೆ ಕುಟುಂಬದ ವಿರುದ್ಧ ಈ ಟೀಕೆಯನ್ನು ನಡೆಸಿದ್ದಕ್ಕಾಗಿ ಧ್ಯಾನ್‌ದೇವ್ ಅವರು ಮಲಿಕ್‌ನಿಂದ 1.25 ಕೋಟಿ ರೂಪಾಯಿ ಪರಿಹಾರವನ್ನು ಕೋರಿದ್ದಾರೆ. ರಜೆಯ ಸಂದರ್ಭದಲ್ಲಿ ವಾಂಖೇಡೆ ನ್ಯಾಯಾಲಯದ ಮೆಟ್ಟಿಲೇರಿದ್ದು, ಸೋಮವಾರ ಪ್ರಕರಣದ ವಿಚಾರಣೆ ನಡೆಯಲಿದೆ.
ಇದು ಮಲಿಕ್ ವಿರುದ್ಧ ದಾಖಲಾಗಿರುವ ಮೊದಲ ಮಾನನಷ್ಟ ಮೊಕದ್ದಮೆಯಲ್ಲವಾದರೂ, ಈ ಹಿಂದೆ ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ಕೂಡ ಬಾಂಬೆ ಹೈಕೋರ್ಟ್‌ನಲ್ಲಿ ಮಲಿಕ್ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಆದಾಗ್ಯೂ, ಈ ಸೂಟ್‌ಗಳಿಂದ ತಾನು ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ಎನ್‌ಸಿಬಿ ಅಧಿಕಾರಿ ವಾಂಖೇಡೆ ಅವಿರುದ್ಧ ಮಾತನಾಡುವುದನ್ನು ಮುಂದುವರಿಸುತ್ತೇನೆ ಎಂದು ಮಲಿಕ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   'ಮಸೂದೆಗೆ ಅಂಕಿತ ಹಾಕಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಬಹುದೇ ? ಸುಪ್ರೀಂ ಕೋರ್ಟಿಗೆ ರಾಷ್ಟ್ರಪತಿ ಮುರ್ಮು 14 ಪ್ರಶ್ನೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement