ಈವರೆಗಿನ ಎಲ್ಲ ದಾಖಲೆ ಪುಡಿ ಮಾಡಿದ ಟಿ 20 ಭಾರತ-ಪಾಕ್ ನಡುವಿನ ಪಂದ್ಯ.. ಇದು ಈವರೆಗಿನ ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯ…!

ನವದೆಹಲಿ: ಟಿ 20 ವಿಶ್ವಕಪ್​ನಲ್ಲಿ ಅಕ್ಟೋಬರ್ 24 ರಂದು ನಡೆದ ಭಾರತ ಹಾಗೂ ಪಾಕಿಸ್ತಾನ್ (India-Pakistan) ಮಧ್ಯದ ಪಂದ್ಯವು ಹೊಸ ದಾಖಲೆ ಬರೆದಿದೆ.
ಈ ಪಂದ್ಯವು ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತೀ ಹೆಚ್ಚು ವೀಕ್ಷಣೆ ಕಂಡ ಪಂದ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ಟಾರ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಭಾರತ-ಪಾಕ್ ನಡುವಣ ಪಂದ್ಯವನ್ನು ಬರೋಬ್ಬರಿ 16.7 ಕೋಟಿ ಜನರು ವೀಕ್ಷಿಸಿದ್ದಾರೆ. ಇದು ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ. ಅಷ್ಟೇ ಅಲ್ಲದೆ ಟಿ 20 ಕ್ರಿಕೆಟ್ ಪಂದ್ಯವು 15 ಕೋಟಿಗೂ ಅಧಿಕ ಮಂದಿ ವೀಕ್ಷಿಸಿರುವುದು ಕೂಡ ಇದೇ ಮೊದಲ ಬಾರಿಗೆ ಎಂಬುದು ವಿಶೇಷ ಎಂದು ಸ್ಟಾರ್‌ ಇಂಡಿಯಾ ಸಂಸ್ಥೆ ತಿಳಿಸಿದೆ.
ಈ ಹಿಂದೆ 2016ರಲ್ಲಿ ಟಿ2 0 ವಿಶ್ವಕಪ್ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಸೆಮಿಫೈನಲ್​ ಪಂದ್ಯವನ್ನು 13.6 ಕೋಟಿ ಜನರು ವೀಕ್ಷಿಸಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿ ಭಾರತ-ಪಾಕಿಸ್ತಾನ್ ಪಂದ್ಯವು ಹೊಸ ಮೈಲುಗಲ್ಲು ಸ್ಥಾಪಿಸಿದೆ. 2016ರ ಭಾರತ-ವೆಸ್ಟ್‌ ಇಂಡೀಸ್‌ ಪಂದ್ಯಕ್ಕಿಂತ 3.1 ಕೋಟಿ ಹೆಚ್ಚು ಜನ ಈ ಪಂದ್ಯವನ್ನು ವೀಕ್ಷಿಸಿದ್ದಾರೆ.
ಸ್ಟಾರ್​ ಸ್ಪೋರ್ಟ್ಸ್​ ಚಾನೆಲ್​ ಮೂಲ ಸಂಸ್ಥೆ ಸ್ಟಾರ್ ಇಂಡಿಯಾ ಬಿಡುಗಡೆ ಮಾಡಿರುವ ಟಿ20 ವಿಶ್ವಕಪ್ 2021 ರ ವೀಕ್ಷಣೆ ಅಂಕಿ ಅಂಶಗಳ ಪ್ರಕಾರ ಅರ್ಹತಾ ಸುತ್ತಿನ ಪಂದ್ಯಗಳು ಹಾಗೂ ಸೂಪರ್ 12 ಪಂದ್ಯಗಳು ಸೇರಿದಂತೆ ಒಟ್ಟಾರೆ 23.8 ಕೋಟಿ ವೀಕ್ಷಕರು ಪಂದ್ಯವನ್ನು ನೋಡಿದ್ದಾರೆ. ಇದರಲ್ಲಿ ಭಾರತ ಹಾಗೂ ಪಾಕಿಸ್ತಾನ್ ನಡುವಣ ಪಂದ್ಯವೊಂದೇ 16 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಎಂದು ಹೇಳಿದೆ.
ಭಾರತವು ಪಂದ್ಯಾವಳಿಯಿಂದ ನಿರ್ಗಮಿಸಿರುವುದು ಅಭಿಮಾನಿಗಳನ್ನು ನಿರಾಶೆಗೊಳಿಸಿದೆ ಎಂಬುದರಲ್ಲಿ ಸಂದೇಹವಿಲ್ಲ ಆದರೆ ದಾಖಲೆಯ ವೀಕ್ಷಕರು ಅಭೂತಪೂರ್ವ ಪ್ರಮಾಣದಲ್ಲಿ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ಕ್ರಿಕೆಟ್‌ನ ಅನನ್ಯ ಶಕ್ತಿಯನ್ನು ಪ್ರದರ್ಶಿಸುತ್ತಾರೆ” ಎಂದು ವಕ್ತಾರರು ಹೇಳಿದ್ದಾರೆ.
ವಿಶ್ವಕಪ್ ಟೂರ್ನಿಯಿಂದ ಭಾರತ ತಂಡವು ಹೊರಬಿದ್ದಿದ್ದು, ಹೀಗಾಗಿ ಸೆಮಿಫೈನಲ್ ಹಂತದ ಪಂದ್ಯಗಳ ವೀಕ್ಷಣೆಯಲ್ಲಿ ಗಣನೀಯ ಇಳಿಕೆ ಕಂಡು ಬರುವ ಸಾಧ್ಯತೆಯಿದೆ. ಸೆಮಿಫೈನಲ್​ನಲ್ಲಿ ಪಾಕಿಸ್ತಾನ್-ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್-ನ್ಯೂಜಿಲೆಂಡ್ ಮುಖಾಮುಖಿಯಾಗಲಿದ್ದು, ಈ ಬಾರಿ ಯಾರು ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರೆ ಕಾದು ನೋಡಬೇಕಿದೆ.

ಪ್ರಮುಖ ಸುದ್ದಿ :-   ಭಾಗವತ ಕಥಾ ನಾಟಕದಲ್ಲಿ ರಾಕ್ಷಸನ ಪಾತ್ರ ಮಾಡಿದ್ದ ಬಾಲಕನ ಕತ್ತು ಸೀಳಿದ ಕಾಳಿದೇವಿ ಪಾತ್ರ ಮಾಡಿದ್ದ ಮತ್ತೊಬ್ಬ ಬಾಲಕ...!

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement