ಕ್ಯಾನ್ಸರ್​ ಪೀಡಿತರಿಗಾಗಿ ಎರಡು ವರ್ಷ ಕೂದಲು ಬಿಟ್ಟು ದಾನ ಮಾಡಿದ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್​ ಪುತ್ರ.. ವಿಡಿಯೊ ಶೇರ್‌ ಮಾಡಿದ ನಟಿ

ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ ಮತ್ತು ಶ್ರೀರಾಮ್ ನೆನೆ ಅವರ ಕಿರಿಯ ಪುತ್ರ ರಿಯಾನ್ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದಂದು (ನವೆಂಬರ್ 7) ತಮ್ಮ ತಲೆ ಕೂದಲನ್ನು ದಾನ ಮಾಡಿದ್ದಾರೆ.
ನವೆಂಬರ್ 7, ಭಾನುವಾರ ರಾಷ್ಟ್ರೀಯ ಕ್ಯಾನ್ಸರ್ ದಿನದ ಸಂದರ್ಭದಲ್ಲಿ, ಮಾಧುರಿ ದೀಕ್ಷಿತ್ ಅವರು ತಮ್ಮ ಕಿರಿಯ ಮಗ ರಿಯಾನ್ ಕ್ಯಾನ್ಸರ್ ರೋಗಿಗಳಿಗೆ ತನ್ನ ಕೂದಲನ್ನು ದಾನ ಮಾಡಲು ಕ್ಷೌರ ಮಾಡುತ್ತಿರುವ ವಿಡಿಯೋವನ್ನು ತಾಯಿ ಮಾಧುರಿ ದೀಕ್ಷತ್ (Madhuri dixit) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಕ್ಯಾನ್ಸರ್ ಪೀಡಿತರಿಗೆ ಅವಶ್ಯಕವಾದ ಉದ್ದದ ತಲೆ ಕೂದಲನ್ನು ದಾನ ಮಾಡಲು 2 ವರ್ಷಗಳಿಂದ ತನ್ನ ಮಗ ರಿಯನ್ ತಲೆ ಕೂದಲು ಕತ್ತರಿಸಿಲ್ಲ ಎಂದು ಇನ್ಸ್ಟಾಗ್ರಾಂ ಪೋಸ್ಟ್​ ಮಾಡಿದ್ದು, ಮಗನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

.

ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ರಿಯಾನ್ ಸುಮಾರು ಎರಡು ವರ್ಷಗಳಿಂದ ಕ್ಷೌರ ಮಾಡಿಲ್ಲ.ಯಾಕೆಂದರೆ ಮಾರ್ಗಸೂಚಿಗಳ ಪ್ರಕಾರ ಅಗತ್ಯವಿರುವ ಉದ್ದನೆಯ ಕೂದಲನ್ನು ಬೆಳೆಯಲು ಅವನಿಗೆ ಸುಮಾರು 2 ವರ್ಷಗಳು ಬೇಕಾಯಿತು. ಮತ್ತು ಇದು ಅಂತಿಮ ಹಂತವಾಗಿತ್ತು. ಇಲ್ಲಿ ನಾವು ಇಂದು ಹೆಮ್ಮೆಯಿಂದ ನಿಂತಿದ್ದೇವೆ ಎಂದು ಅವರು ತಮ್ಮ ಪತಿ ಡಾ ಶ್ರೀರಾಮ್ ನೆನೆ ಅವರನ್ನು ಟ್ಯಾಗ್ ಮಾಡಿ ಬರೆದಿದ್ದಾರೆ.
ರಾಷ್ಟ್ರೀಯ ಕ್ಯಾನ್ಸರ್ ದಿನದ ಸಂದರ್ಭದಲ್ಲಿ, ನಾನು ನಿಜವಾಗಿಯೂ ವಿಶೇಷವಾದದ್ದನ್ನು ಹಂಚಿಕೊಳ್ಳಲು ಬಯಸುತ್ತೇನೆ. ಕ್ಯಾನ್ಸರ್​ನಿಂದಾಗಿ ಕೀಮೋಗೆ ಒಳಗಾಗುತ್ತಿರುವ ಹಲವಾರು ಜನರನ್ನು ನೋಡಿ ರಿಯಾನ್ ಬೇಸರಗೊಂಡಿದ್ದರು. ಹೀಗಾಗಿ ಅಂತಹವರಿಗೆ ತನ್ನ ಕೂದಲನ್ನು ದಾನ ಮಾಡಲು ರಿಯಾನ್ 2 ವರ್ಷಗಳ ಹಿಂದೆ ನಿರ್ಧರಿಸಿದ್ದರು. ರಿಯಾನ್ ಈ ನಿರ್ಧಾರ ನಮಗೆ ಆಶ್ಚರ್ಯವನ್ನುಂಟು ಮಾಡಿತ್ತು ಅಲ್ಲದೆ ಅತಿ ಹೆಚ್ಚು ಹೆಮ್ಮೆ ಉಂಟು ಮಾಡಿದೆ ಎಂದು ಮಾಧುರಿ ದೀಕ್ಷಿತ್ ಇನ್ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.
ನಟಿ ಮಾಧುರಿ ದೀಕ್ಷಿತ್ ಅಕ್ಟೋಬರ್ 17, 1999 ರಂದು ವೈದ್ಯ ಶ್ರೀರಾಮ್ ನೆನೆ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಆರಿನ್ ಮೊದಲ ಪುತ್ರನಾಗಿದ್ದು, ರಿಯಾನ್ ದ್ವಿತೀಯ ಪುತ್ರ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ; ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement