ನಟಿ ಪೂನಂ ಪಾಂಡೆ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು; ಪತಿ ಬಂಧನ

ಮುಂಬೈ : ಬಾಲಿವುಡ್‌ ನ ಖ್ಯಾತ ನಟಿ ಪೂನಂ ಪಾಂಡೆ ತನ್ನ ಮೇಲೆ ಪತಿ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದು, ಈ ಸಂಬಂಧ ಪೂನಂ ಪಾಂಡೆ ಪತಿ ಸ್ಯಾಮ್‌ ಬಾಂಬೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಯಿಂದಾಗಿ ಪೂನಂ ಪಾಂಡೆ ಅವರ ತಲೆ, ಕಣ್ಣು, ಮುಖಕ್ಕೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಮಾಡಲಾಗಿದೆ.
ಮಾದಕ ನಟಿ ಪೂನಂ ಪಾಂಡೆ ನಿರ್ದೇಶಕ, ನಿರ್ಮಾಪಕ ಸ್ಯಾಮ್‌ ಬಾಂಬೆ ಎಂಬವರನ್ನು ಮದುವೆಯಾಗಿದ್ದರು. ಕಳೆದ ವರ್ಷದ ಪೂನಂ ಪಾಂಡೆ ಸ್ಯಾಮ್‌ ಅಹ್ಮದ್‌ ಅವರನ್ನು ಗೋವಾದಲ್ಲಿ ಮದುವೆಯಾಗಿದ್ದರು. ಮದುವೆಯಾದ ಎರಡು ವಾರಗಳಲ್ಲಿಯೇ ಇಬ್ಬರ ನಡುವೇ ಕಿತ್ತಾಟ ಶುರುವಾಗಿತ್ತು. ಇದೇ ಕಾರಣಕ್ಕೆ ಪೂನಂ ಪಾಂಡೆ ತಮ್ಮ ಮದುವೆಯನ್ನು ಮುರಿದುಕೊಳ್ಳಲು ಮುಂದಾಗಿದ್ದರು. ಈ ನಡುವೆ ಇಬ್ಬರು ಮತ್ತೆ ಒಂದಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ಮತ್ತೆ ಸ್ಯಾಮ್‌ ಹಲ್ಲೆ ನಡೆಸಿದ್ದು, ಪೂನಂ ಪಾಂಡೆ ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈತನ ವಿರುದ್ಧ ಪೂನಂ ಪಾಂಡೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೂನಂ ನೀಡಿರುವ ದೂರಿನ ಪ್ರಕಾರ, ಸ್ಯಾಮ್ ತನ್ನ ಮೊದಲ ಪತ್ನಿ ಅಲ್ವಿರಾ ಜೊತೆ ಜಗಳವಾಡಿ ಬಂದಿದ್ದರು. ಇದರಿಂದ ಸ್ಯಾಮ್ ಕೋಪಗೊಂಡಿದ್ದು, ಕೋಪದಲ್ಲಿ ತನ್ನ ಕೂದಲು ಹಿಡಿದು ಆಕೆಯ ತಲೆಯನ್ನು ಗೋಡೆಗೆ ತಳ್ಳಿದ್ದಾರೆ. ನಂತರ ತನ್ನ ಮುಖಕ್ಕೆ ಹೊಡೆದಿದ್ದಾರೆ ಎಂದು ಪೂನಂ ಆರೋಪಿಸಿದ್ದಾರೆ. ಪೂನಂ ಪಾಂಡೆ ಅವರ  ದೂರಿನ ಅನ್ವಯ ಬಾಂದ್ರಾ ಪೊಲೀಸರು ಕ್ರಮ ಕೈಗೊಂಡಿದ್ದು, ಪೂನಂ ಪಾಂಡೆ ಪತಿ ಸ್ಯಾಮ್ ಬಂಧಿಸಿದ್ದಾರೆ ಅಲ್ಲದೇ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement