ವಿರಾಟ್ ಕೊಹ್ಲಿ ಮಗಳಿಗೆ ಆನ್‌ಲೈನ್‌ನಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ್ದ ಹೈದರಾಬಾದ್ ಮೂಲದ ಟೆಕ್ಕಿ ಬಂಧನ

ಮುಂಬೈ: ಭಾರತದ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಾವರ ಒಂಭತ್ತು ತಿಂಗಳ ಪುತ್ರಿ ವಮಿಕಾಗೆ ಅತ್ಯಾಚಾರ ಬೆದರಿಕೆ ಹಾಕಿದ್ದಕ್ಕಾಗಿ ಹೈದರಾಬಾದ್‌ನ 23 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತನ್ನ ಆರಂಭಿಕ ಮುಖಾಮುಖಿಯಲ್ಲಿ ಸೋತ ನಂತರ ಧರ್ಮ ಆಧಾರಿತ ಆನ್‌ಲೈನ್ ದಾಳಿ ಮೊಹಮ್ಮದ್‌ ಶಮಿ ವಿರುದ್ಧ ನಡೆದ ನಂತರ ವಿರಾಟ್‌ ಕೊಹ್ಲಿ ವೇಗಿ ಮೊಹಮ್ಮದ್ ಶಮಿಗೆ ಬೆಂಬಲ ವ್ಯಕ್ತಪಡಿಸಿದ ನಂತರ ಟ್ವಿಟ್ಟರ್‌ನಲ್ಲಿ ಈ ಈ ಬೆದರಿಕೆ ಬಂದಿತ್ತು.
ಪೊಲೀಸರ ಪ್ರಕಾರ, ಆರೋಪಿ ಹೈದರಾಬಾದ್ ನಿವಾಸಿಯಾಗಿದ್ದು, ಈ ಹಿಂದೆ ಫುಡ್ ಡೆಲಿವರಿ ಆ್ಯಪ್‌ನಲ್ಲಿ ಕೆಲಸ ಮಾಡುತ್ತಿದ್ದು, ಈಗ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಭಾರತವು ಪಾಕಿಸ್ತಾನದ ವಿರುದ್ಧ ಸೋತ ನಂತರ, ಶಮಿ ಅವರು ಧರ್ಮದ ಕಾರಣಕ್ಕೆ ಪಾಕಿಸ್ತಾನಕ್ಕೆ ಹೋಗಬೇಕೆಂದು ಆನ್‌ಲೈನ್ ನಿಂದನೆಯನ್ನು ಎದುರಿಸಿದರು. ನ್ಯೂಜಿಲೆಂಡ್ ವಿರುದ್ಧದ ಭಾರತ ಪಂದ್ಯದ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ, ಅವರ ಧರ್ಮದ ಆಧಾರದ ಮೇಲೆ ಯಾರನ್ನಾದರೂ ಗುರಿಯಾಗಿಸುವುದು ಸರಿಯಲ್ಲ ಎಂದು ವಿರಾಟ್‌ ಕೊಹ್ಲಿ ಶಮಿ ಬೆಂಬಲಕ್ಕೆ ನಿಂತರು. ಇದಾದ ನಂತರ ಈಗ ಅಳಿಸಲಾದ ಟ್ವಿಟ್ಟರ್ ಖಾತೆ @Criccrazyygirl ವಿರಾಟ್ ಮತ್ತು ಅನುಷ್ಕಾ ಶರ್ಮಾ ಅವರ ಒಂಬತ್ತು ತಿಂಗಳ ಮಗಳು ವಮಿಕಾಗೆ ಅತ್ಯಾಚಾರ ಆರೋಪಿ ಟೆಕ್ಕಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement