ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಆಯತಪ್ಪಿ ಬಿದ್ದ ಮಹಿಳೆ ರೈಲಿನಡಿ ಸಿಲುಕುವುದು ತಪ್ಪಿಸಿದ ಪೊಲೀಸರು.. ಸಿಸಿಟಿವಿ ವಿಡಿಯೊ ವೀಕ್ಷಿಸಿ

ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋದ ಮಹಿಳೆಯೊಬ್ಬರು ಆಯತಪ್ಪಿ ಬಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಅಲ್ಲೇ ಇದ್ದ ರೈಲ್ವೆ ಪೊಲೀಸರು ಸಮಯ ಪ್ರಜ್ಞೆ ತೋರಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ ರೈಲು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟಾಗ ಈ ಘಟನೆ ಸಂಭವಿಸಿದೆ. ಸಂಬಂಧಿಕರನ್ನು ರೈಲು ಹತ್ತಿಸಲು ಬಂದಿದ್ದ ಮಹಿಳೆ ತಾನೂ ರೈಲು ಏರಿದ್ದರು ಎನ್ನಲಾಗಿದೆ. ರೈಲು ಹೊರಡುತ್ತಿದ್ದಂತೆ ಗಾಬರಿಗೊಂಡ ಮಹಿಳೆ ರೈಲು ಚಲಿಸುತ್ತಿರುವಾಗಲೇ ಕೆಳಗಿಳಿಯಲು ಮುಂದಾಗಿದ್ದಾರೆ. ವ್ಯಕ್ತಿಯೊಬ್ಬರು ಮಹಿಳೆಯ ಕೈ ಹಿಡಿದು ಕೆಳಗಿಳಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ರೈಲು ಚಲಿಸುತ್ತಿದ್ದುದರಿಂದ ಸಮತೋಲನ ಕಾಯ್ದುಕೊಳ್ಳಲು ವಿಫಲರಾಗಿ ರೈಲು ಸಮೀಪವೇ ಪ್ಲಾಟ್‌ಫಾರ್ಮ್‌ ಮೇಲೆ ಬಿದ್ದಿದ್ದಾರೆ.

ಇನ್ನೇನು ರೈಲ್ವೆ ಹಳಿ ಮೇಲೆ ಉದುಳುದ್ದರೇನೋ, ತಕ್ಷಣವೇ ನೋಡಿದ ರೈಲ್ವೆ ಪೊಲೀಸರು ಸಮಯ ಪ್ರಜ್ಞೆ ಮೆರೆದು ಅವಳನ್ನು ಕಾಪಾಡಿದ್ದಾರೆ. ಕೆಳಗೆ ಬೀಳುವ ಹಂತದಲ್ಲಿದ್ದ ಈ ಮಹಿಳೆಯನ್ನು ತಕ್ಷಣವೇ ಓಡಿಬಂದು ಮೂವರು ಪೊಲೀಸರು ಕೆಳಗೆ ಬೀಳದಂತೆ ರಕ್ಷಿಸಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದ್ದರೂ ಮಹಿಳೆ ಚಲಿಸುತ್ತಿದ್ದ ರೈಲಿನಡಿ ಸಿಲುಕುವ ಅಪಾಯವಿತ್ತು. ಪೊಲೀಸರ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಈ ಘಟನೆ ರೈಲ್ವೆ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement