ಹರಿಕುಮಾರ್ ಭಾರತದ ನೌಕಾ ಪಡೆಯ ನೂತನ ಮುಖ್ಯಸ್ಥ

ನವದೆಹಲಿ: ದೇಶದ ನೌಕಾಪಡೆ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಆರ್ ಹರಿ ಕುಮಾರ್ ನೇಮಕಗೊಂಡಿದ್ದಾರೆ. ನವೆಂಬರ್‌ ೩೦ ರಂದು ಹರಿಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ನೌಕಾಪಡೆಯ ಹಾಲಿ ಮುಖ್ಯಸ್ಥರಾದ ಅಡ್ಮಿರಲ್ ಕರಮ್ಬಿರ್ ಸಿಂಗ್ ನ.೩೦ ರಂದು ನಿವೃತ್ತರಾಗಲಿದ್ದಾರೆ.
ಉಪಅಡ್ಮಿರಲ್ ಕುಮಾರ್ ಅವರು ಪ್ರಸ್ತುತ ವೆಸ್ಟ್ರನ್ ನೌಕಾ ಕಮಾಂಡ್ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಅಡ್ಮಿರಲ್ ಆರ ಹರಿಕುಮಾರ್ ಅವರನ್ನು ಮುಂದಿನ ನೌಕಾಪಡೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದು, ನವೆಂಬರ್‌ ೩೦ರಂದು ಮಧ್ಯಾಹ್ನದಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ದಕ್ಷಿಣ ಕಮಾಂಡ್ ನ ಕಮಾಂಡಿಂಗ್-ಇನ್-ಚೀಫ್ ಆಗಿರುವ ಉಪ ಅಡ್ಮಿರಲ್ ಅನಿಲ್ ಕುಮಾರ್ ಚಾವ್ಲಾ ಅಡ್ಮಿರಲ್ ಸಿಂಗ್ ಅವರ ಬಳಿಕ ಸೇವಾ ಹಿರಿತನ ಹೊಂದಿರುವ ಅಧಿಕಾರಿಯಾಗಿದ್ದಾರೆ. ಆದರೆ ಅವರೂ ಸಹ ನವೆಂಬರ್‌ ೩೦ಕ್ಕೇ ನಿವೃತ್ತರಾಗುತ್ತಿರುವ ಕಾರಣದಿಂದಾಗಿ ಹರಿಕುಮಾರ್ ಅವರನ್ನು ಆ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಪ ಅಡ್ಮಿರಲ್ ಕುಮಾರ್ ಅವರು ೧೯೮೩ ರ ಜ.೧ ರಂದು ಸೇವೆಗೆ ಸೇರ್ಪಡೆಯಾಗಿದ್ದರು. ಐಎನ್ ಎಸ್ ನಿಶಾಂಕ್, ಮಿಸೈಲ್ ಕಾರ್ವೆಟ್, ಐಎನ್‌ಎಸ್ ಕೋರಾ, ಗುರಿ ನಿರ್ದೇಶಿತ ಕ್ಷಿಪಣಿ ವಿಧ್ವಂಸಕ ಐಎನ್‌ಎಸ್ ರಣವೀರ್ ಗಳಲ್ಲಿ ಕಾರ್ಯನಿರ್ವಹಿಸಿರುವ ಕುಮಾರ್ ಅವರು ಅಪಾರ ಅನುಭವ ಹಾಗೂ ಹಿಡಿತವನ್ನು ಹೊಂದಿದ್ದಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement