ನ.16ರಂದು ಅರಮನೆ ಮೈದಾನದಲ್ಲಿ ʼಪುನೀತಾ ನಮನʼ ಕಾರ್ಯಕ್ರಮ : ಸಿನಿರಂಗಕ್ಕೆ ಮಾತ್ರ ಪ್ರವೇಶ

ಬೆಂಗಳೂರು : ಪವರ್‌ ಸ್ಟಾರ್‌ ಪುನೀತರಾಜ್‌ಕುಮಾರ್‌ ನಿಧನರಾಗಿ ಎರಡು ವಾರ ಕಳೆದಿವೆ. ಅವರ ಸ್ಮರಣಾರ್ಥ ನವೆಂಬರ್​ 16ರಂದು ಕನ್ನಡ ಚಿತ್ರೋದ್ಯಮದ ಪರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ‘ಪುನೀತ್ ನಮನ’ ಕಾರ್ಯಕ್ರಮ ಆಯೋಚಿಸಿದೆ.
ನವೆಂಬರ್‌ 16ರಂದು ಅರಮನೆ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 3 ಘಂಟೆ ನಂತರ ಕಾರ್ಯಕ್ರಮ ಆರಂಭವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೈಸೂರು ರಾಜ ಮನೆತನದ ಯದುವೀರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಫಿಲ್ಮ್‌ ಚೇಂಬರ್‌ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದರು. ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್‌ಗಳು,ರಾಜಕೀಯ ನಾಯಕರು, ಇತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಮನ ಕಾರ್ಯಕ್ರಮ ಸಿನಿಮಾರಂಗಕ್ಕೆ ಮಾತ್ರ ಸೀಮಿತವಾಗಿದ್ದು, ಸಾರ್ವಜನಿಕರಿಗೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 1,500 ಜನರನ್ನ ಸೇರಿಸಿ ಮಾಡುವ ಯೋಜನೆಯಿದೆ ಎಂದು ಸಾ.ರಾ ಗೋವಿಂದು ಮಾಹಿತಿ ನೀಡಿದ್ದಾರೆ.
ಪುನೀತ್ ನಮನ’ ಕಾರ್ಯಕ್ರಮದ ದಿನ ಕರ್ನಾಟಕದಲ್ಲಿ ಚಿತ್ರೋದ್ಯಮ‌ ಬಂದ್ ಮಾಡಲಾಗುತ್ತದೆ. ನವೆಂಬರ್‌ 16ರಂದು ಮಧ್ಯಾಹ್ನ 3ರಿಂದ ಸಂಜೆ 6ರ ವರೆಗೂ ಕಾರ್ಯಕ್ರಮ ನಡೆಯುತ್ತದೆ. ಗಾಯಕರಾದ ಗುರುಕಿರಣ್, ವಿಜಯ್ ಪ್ರಕಾಶ್ ಅವರು ಪುನೀತ್ ರಾಜ್​ಕುಮಾರ್​ ಹಾಡುಗಳನ್ನ ಹಾಡಲಿದ್ದಾರೆ. ನಾಗೇಂದ್ರ ಪ್ರಸಾದ್ ಬರೆದ ವಿಶೇಷ ಗೀತೆ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ಪುನೀತ್ ನಡೆದು ಬಂದ ದಾರಿ ಬಗ್ಗೆ ಒಂದು ವಿಡಿಯೊ ತೋರಿಸಲಾಗುತ್ತದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement