ಹಳಿತಪ್ಪಿದ ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲು

ಬೆಂಗಳೂರು: ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ 5 ಬೋಗಿಗಳು ಇಂದು (ಶುಕ್ರವಾರ) ಮುಂಜಾನೆ ಹಳಿ ತಪ್ಪಿದೆ.
ಇಂದು ಮುಂಜಾನೆ 3:50 ರ ಸುಮಾರಿಗೆ, ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ತೊಪ್ಪೂರು – ಶಿವಾಡಿ ಬಳಿ ಚಲಿಸುತ್ತಿದ್ದ ವೇಳೆ ಹಠಾತ್ ಆಗಿ ಬಂಡೆಗಳು ಉರುಳಿ ಬಿದ್ದಿದೆ. ಹೀಗಾಗಿ ರೈಲಿನ 5 ಬೋಗಿಗಳು ಹಳಿ ತಪ್ಪಿದೆ ಎಂದು ತಿಳಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ರೈಲಿನಲ್ಲಿದ್ದ ಪ್ರಯಾಣಿಸುತ್ತಿದ್ದ 2,348 ಪ್ರಯಾಣಿಕರು ಸಹ ಸುರಕ್ಷಿತರಾಗಿದ್ದಾರೆ. ಗುರುವಾರ ಸಂಜೆ 6:05 ಕ್ಕೆ ಕಣ್ಣೂರಿನಿಂದ ರೈಲು ಹೊರಟಿತ್ತು.
ಏತನ್ಮಧ್ಯೆ, ರೈಲಿನ ಆರು ಕೋಚ್‌ಗಳ ಹಿಂಭಾಗದ ಭಾಗ ಮತ್ತು ಪ್ರಯಾಣಿಕರೊಂದಿಗೆ ಎಸ್‌ಎಲ್‌ಆರ್ ಅನ್ನು ತೊಪ್ಪೂರು ಕಡೆಗೆ ಮತ್ತು ಮುಂದೆ ಸೇಲಂಗೆ ತೆರವುಗೊಳಿಸಲಾಗಿದೆ. ತೊಪ್ಪೂರುನಲ್ಲಿ ರೈಲು ನಿಲುಗಡೆಯಾಗಲಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ 15 ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ಅಪಘಾತ ಸ್ಥಳದಲ್ಲಿ ಐದು ಬಸ್‌ಗಳು, ನೀರು ಮತ್ತು ಲಘು ಉಪಾಹಾರದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಎಂದು ರೈಲ್ವೆ ತಿಳಿಸಿದೆ.
ಇದೀಗ ಅಪಘಾತ ಸ್ಥಳಕ್ಕೆ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಮತ್ತು ಸ್ಥಳೀಯ ಆಡಳಿತವು ಭೇಟಿ ನೀಡಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.

ಪ್ರಮುಖ ಸುದ್ದಿ :-   ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement