ಕೋವಿಡ್‌ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ ಭಾರತದ ಖ್ಯಾತ ಆಟಗಾರ: ಮುಷ್ತಾಕ್ ಅಲಿ ಟ್ರೋಫಿಗೆ ಕೈಬಿಟ್ಟ ಆಯ್ಕೆಗಾರರು..!

ಭಾರತದ ಮಾಜಿ ಬ್ಯಾಟರ್ ಮುರಳಿ ವಿಜಯ್ ಅವರು ಕೋವಿಡ್ -19 ವಿರುದ್ಧ ಲಸಿಕೆ ಹಾಕಿಸಿಕೊಳ್ಳದ ಕಾರಣಕ್ಕೆ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ತಮಿಳುನಾಡು ಆಯ್ಕೆದಾರರು ತಮ್ಮ ಹೆಸರನ್ನು ಪರಿಗಣಿಸದ ಕಾರಣ ವೃತ್ತಿಪರ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. .
37 ವರ್ಷದ ವಿಜಯ್ ತಮಿಳುನಾಡು ಪರ ಆಡುತ್ತಿದ್ದಾರೆ. ಆದರೆ, ಈ ಬಾರಿ ಅವರಿಗೆ ಅವಕಾಶ ಸಿಕ್ಕಿಲ್ಲ. ಆಯ್ಕೆಗಾರರು ವಿಜಯ್ ಹೆಸರನ್ನು ಪರಿಗಣಿಸಲಿಲ್ಲ.
ಅಲ್ಲದೆ, ಬಯೋ ಬಬಲ್‌ನಲ್ಲಿರಲು ಒಲ್ಲೆ ಎಂದಿದ್ದಾರೆ ಮತ್ತು BCCI ಯ SOP ಸ್ವೀಕರಿಸಲು ಸಿದ್ಧರಿಲ್ಲ. ಕೊರೊನಾ ವೈರಸ್ ಉಲ್ಬಣದ ನಂತರ ಕ್ರಿಕೆಟ್‌ಗೆ ಮರಳಲು ಬಿಸಿಸಿಐ ನಿರ್ಧರಿಸಿತ್ತು. ಆದರೆ ಪಂದ್ಯಗಳಲ್ಲಿ ಆಟಗಾರರು ಕೋವಿಡ್ -19 ಲಸಿಕೆ ಪಡೆಯುವುದು ಕಡ್ಡಾಯ ಮಾಡಲಾಗಿದೆ. ಅದೇ ಸಮಯದಲ್ಲಿ, ಅವರು ಬಯೋ ಬಬಲ್‌ನಲ್ಲಿ ಉಳಿದು ಕ್ರಿಕೆಟ್ ಆಡಬೇಕಾಗುತ್ತದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬಿಸಿಸಿಐ ರಾಜ್ಯ ಸಂಘಗಳಿಗೂ ಆದೇಶ ನೀಡಿತ್ತು.
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಮುರಳಿ ವಿಜಯ್ ನಿರ್ಧಾರದ ಬಗ್ಗೆ ತಮಿಳುನಾಡು ಮಂಡಳಿಯ ಅಧಿಕಾರಿ, ‘ಮುರಳಿ ವಿಜಯ್ ಅವರು ಲಸಿಕೆ ತೆಗೆದುಕೊಳ್ಳಲು ಬಯಸುವುದಿಲ್ಲ ಮತ್ತು ಬಿಸಿಸಿಐ ನಿಯಮಗಳ ಪ್ರಕಾರ, ಆಟಗಾರರಿಗೆ ಲಸಿಕೆ ಕಡ್ಡಾಯ. ಅಲ್ಲದೆ, ಯಾವುದೇ ಪಂದ್ಯಾವಳಿ ಪ್ರಾರಂಭವಾಗುವ ಒಂದು ವಾರದ ಮೊದಲು, ಅವರು ಬಯೋ ಬಬಲ್‌ಗೆ ಸೇರಬೇಕಾಗುತ್ತದೆ ಮತ್ತು ಆ ತಂಡವು ಪಂದ್ಯಾವಳಿಯಲ್ಲಿ ಉಳಿಯುವವರೆಗೆ ಈ ಬಯೋ ಬಬಲ್‌ನಲ್ಲಿಯೇ ಇರಬೇಕಾಗುತ್ತದೆ. ಆದರೆ ವಿಜಯ್ ಇದಕ್ಕೆ ಸಿದ್ಧರಿರಲಿಲ್ಲ, ಹೀಗಾಗಿ ತಮಿಳುನಾಡು ಕ್ರಿಕೆಟ್ ಸಂಸ್ಥೆ ಅವರ ಹೆಸರಿನಲ್ಲಿ ಆಯ್ಕೆಯನ್ನು ಪರಿಗಣಿಸಲಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡು ಆಯ್ಕೆದಾರರು ಮುರಳಿ ವಿಜಯ್ ಅವರ ಹೆಸರನ್ನು ಆಯ್ಕೆ ಸಭೆಯಲ್ಲಿ ಚರ್ಚಿಸಿಲ್ಲ ಎಂದು ಮೂಲಗಳು ತಿಳಿಸಿವೆ. ವಿಜಯ್ ಅವರು ಲಸಿಕೆ ತೆಗೆದುಕೊಳ್ಳಲು ಒಪ್ಪಿಕೊಂಡಿದ್ದರೂ ಸಹ ತಮಿಳುನಾಡು ತಂಡದಲ್ಲಿ ಸ್ಥಾನ ಪಡೆಯದಿರಬಹುದು ಎಂದು ಹೇಳಲಾಗಿದೆ. ಯಾಕೆಂದರೆ, ವಿಜಯ್ ಅವರ ಈ ವಯಸ್ಸಿನಲ್ಲಿ ಮತ್ತೊಮ್ಮೆ ಆಯ್ಕೆಗೆ ಪರಿಗಣಿಸಲು ಅವರ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಾಗುತ್ತದೆ.
ಮುರಳಿ ವಿಜಯ್ ಟೀಮ್ ಇಂಡಿಯಾ ಪರವಾಗಿ 2018ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯ ಆಡಿದರು. ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಈ ಪಂದ್ಯವನ್ನು ಆಡಿದರು. ವಿಜಯ್ ಅವರು ಈ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಆಡಿದ್ದರೂ ಸಹ ಪ್ಲೇಯಿಂಗ್ ಇಲೆವೆನ್ ಅಲ್ಲಿ ಅವಕಾಶ ಸಿಕ್ಕಿರಲಿಲ್ಲ.

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement