ಜನನಿಬಿಡ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿದ ಲೋಡ್ ತುಂಬಿದ ಟ್ರಾಲಿ…!: ವೀಕ್ಷಿಸಿ

ಅತ್ಯಂತ ಜನನಿಬಿಡ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡ ಲೋಡ್ ತುಂಬಿದ ಟ್ರಾಲಿಯೊಂದು ಹಿಮ್ಮುಖವಾಗಿ ಚಲಿಸಿ ಆತಂಕ ಸೃಷ್ಟಿಸಿದೆ ಘಟನೆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಪೂರ್ಣ ಪ್ರಮಾಣದಲ್ಲಿ ಲೋಡ್‌ ಆಗಿರುವ ಟ್ರಾಲಿ ನಿಯಂತ್ರಣ ಕಳೆದುಕೊಂಡ ಪರಿಣಾಮ ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿದೆ. ಅದರ ಹಿಂದೆಯೇ ಕೆಲವರು ಕೂಗುತ್ತ ಓಡುವುದು ವಿಡಿಯೊದಲ್ಲಿ ಕಾಣುತ್ತದೆ. ಹಿಮ್ಮುಖವಾಗಿ ಚಲಿಸಿದ ಟ್ರಾಲಿ ಕೊನೆಗೆ ರಸ್ತೆ ವಿಭಜಕದಲ್ಲಿದ್ದ ವಿದ್ಯುತ್‌ ಕಂಬಕ್ಕೆ ಡಿಕ್ಕೆ ಹೊಡೆದು ನಿಲ್ಲುತ್ತದೆ. ಜನರು ಗಾಬರಿಯಾಗಿ ಕೂಗುವುದು ಕಂಡುಬರುತ್ತದೆ.

https://twitter.com/DRGulati80/status/1459109033860866082?ref_src=twsrc%5Etfw%7Ctwcamp%5Etweetembed%7Ctwterm%5E1459109033860866082%7Ctwgr%5E%7Ctwcon%5Es1_&ref_url=https%3A%2F%2Fvijaykarnataka.com%2Fviral-adda%2Ftrending%2Ffunny-video-of-a-loaded-trolley-running-out-of-control-is-now-going-viral-on-social-media%2Farticleshow%2F87680258.cms

@DRGulati80 ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೊ ತುಣುಕನ್ನು ಅಪ್ಲೋಡ್ ಮಾಡಿದ್ದಾರೆ. `ಯಾವುದೇ ಪ್ರಾಣ ಹಾನಿ, ಆಸ್ತಿ ನಷ್ಟ ಸಂಭವಿಸಿಲ್ಲ. ಆದರೆ, ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ನಂತರ “ಎರಡನೇ ಬಲ್ಬ್‌ ಉರಿದಿದೆ’ ಎಂದು ತಮಾಷೆಯ ಕ್ಯಾಪ್ಶನ್ ಬರೆದು ವಿಡಿಯೊ ಹಂಚಿಕೊಳ್ಳಲಾಗಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement