ದೆಹಲಿಯಲ್ಲಿ ವಾಯುಮಾಲಿನ್ಯ ಏರಿಕೆ : ಎರಡು ದಿನ ಲಾಕ್‌ಡೌನ್‌ಗೆ ಸುಪ್ರೀಂಕೋರ್ಟ್‌ ಸಲಹೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಏರಿಕೆ ಆಗುತ್ತಿರುವ ವಾಯುಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌ ವಾಯ ಗುಣಮಟ್ಟ ತೀವ್ರ ಕುಸಿದಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಲಾಕ್‌ಡೌನ್ ಮಾಡುವಂತೆ ಸಲಹೆ ನೀಡಿದೆ.
ದೆಹಲಿ ನಗರದಲ್ಲಿ ವಾಯುಮಾಲಿನ್ಯದ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ದೆಹಲಿಯ 17 ವರ್ಷದ ವಿದ್ಯಾರ್ಥಿ ಆದಿತ್ಯ ದುಬೆ ಸವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಸೂರ್ಯಕಾಂತ್ ನೇತೃತ್ವದ ವಿಶೇಷ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿ, ವಾಯುಮಾಲಿನ್ಯ ಬಗ್ಗೆ ಕ್ರಮ ಕೈಗೊಳ್ಳದ ಕೇಂದ್ರ ಹಾಗೂ ದೆಹಲಿ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ.
ವಾಯು ಮಾಲಿನ್ಯವನ್ನು ನಿಭಾಯಿಸಲು ಸರ್ಕಾರಗಳು ಯಾವ ಕ್ರಮಗಳನ್ನು ಕೈಗೊಂಡಿವೆ.? ನಗರದಲ್ಲಿ ಎಂಥಾ ಪರಿಸ್ಥಿತಿ ಇದೆ ಎಂಬುದನ್ನು ನಾವು ನೋಡಿದ್ದೇವೆ. ಮನೆಯ ಒಳಗಡೆ ಇದ್ದಾಗಲೂ ಮಾಸ್ಕ್ ಧರಿಸುವ ಸ್ಥಿತಿ ಇದೆ ಎಂದು ನ್ಯಾಯಮೂರ್ತಿ ಎನ್..ವಿ. ರಮಣ ಕಳವಳ ವ್ಯಕ್ತಪಡಿಸಿದರು.
ಈ ವಾತಾವರಣದಲ್ಲಿ ಚಿಕ್ಕ ಮಕ್ಕಳು ಶಾಲೆಗೆ ಹೋಗಬೇಕು, ನಾವು ಅವರಿಗೆ ಇದನ್ನು ಒಡ್ಡುತ್ತಿದ್ದೇವೆ. ನಾವು ಅವರನ್ನು ಮಾಲಿನ್ಯ, ಸಾಂಕ್ರಾಮಿಕ ಮತ್ತು ಡೆಂಗ್ಯೂಗೆ ಒಡ್ಡುತ್ತಿದ್ದೇವೆ ಎಂದು ಏಮ್ಸ್‌ ನಿರ್ದೇಶಕ ಡಾ ಗುಲೇರಿಯಾ ಹೇಳಿದ್ದಾರೆ ಎಂದು ನ್ಯಾಯಾಲಯ ಹೇಳಿತು.
ಸರ್ಕಾರದ ಪರ ಮಾತನಾಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮದೇ ರೀತಿಯಲ್ಲಿ ವಾಯುಮಾಲಿನ್ಯ ವಿರುದ್ಧ ಹೋರಾಡುತ್ತಿವೆ. ಸರ್ಕಾರಗಳು ತೆಗೆದುಕೊಂಡ ಕ್ರಮಗಳ ಸಂಕ್ಷಿಪ್ತ ಸಾರಾಂಶವನ್ನು ನಾವು ಸಲ್ಲಿಸಿದ್ದೇವೆ ಎಂದು ಪೀಠಕ್ಕೆ ತಿಳಿಸಿದರು.
ಬೆಳೆ ಕಡ್ಡಿಯನ್ನು ಕೊಳೆಯುವಂತೆ ಮಾಡಲು ಸಿತು ಕ್ರಾಪ್ ಸ್ಟಬ್ಬಲ್ ಮ್ಯಾನೇಜ್‌ಮೆಂಟ್‌ನಲ್ಲಿ ಎರಡು ಲಕ್ಷ ಯಂತ್ರಗಳಿವೆ. ಶಾಸನಬದ್ಧ ಆಯೋಗವು ಬಯೋಮಾಸ್ ಪ್ಲಾಂಟ್‌ಗಳಲ್ಲಿ ಸ್ಟಬಲ್ ಅನ್ನು ಬಳಸಲು ಅನುಮತಿ ನೀಡಿದೆ. ಆದರೆ, ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮೆಹ್ತಾ ಹೇಳಿದರು. ಇದೇ ಸಂದರ್ಭದಲ್ಲಿ ಪಂಜಾಬ್ ಸರ್ಕಾರ ಗುರಿಯಾಗಿಸಿದ ಮೆಹ್ತಾ, ಪಂಜಾಬ್‌ನಲ್ಲಿ ಕಳೆದ ಕೆಲ ದಿನಗಳಿಂದ ವಿಪರೀತ ಹೊಗೆ ಬರುತ್ತಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಂಜಾಬ್ ಸರ್ಕಾರ ಕೆಲಸ ಮಾಡಬೇಕೆಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯನ್ಯಾಯಮೂರ್ತಿ ರಮಣ ಅವರು ‘ರೈತರೊಬ್ಬರೇ ಹೊಣೆ ಎಂಬಂತೆ ಬಿಂಬಿಸುತ್ತಿದ್ದೀರಿ. ಆದರೆ, ಶೇ.40 ದಿಲ್ಲಿ ಜನರನ್ನು ನಿಯಂತ್ರಿಸಲು ಕ್ರಮಗಳು ಎಲ್ಲಿವೆ? ಪಟಾಕಿಗಳ ಬಗ್ಗೆ ಕ್ರಮ ಏನು? ವಾಹನ ಮಾಲಿನ್ಯಕ್ಕೆ ಕ್ರಮ ಏನು ಎಂದು ಪ್ರಶ್ನಿಸಿದರು. ಅಲ್ಲದೆ, ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ತಾಕೀತು ಮಾಡಿದರು.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement