ನ.​​16ರಿಂದ ಭಕ್ತರ ದರ್ಶನಕ್ಕೆ ಶಬರಿಮಲೆ ಮುಕ್ತ.. ಪ್ರತಿದಿನ 25 ಸಾವಿರ ಭಕ್ತರಿಗೆ ಮಾತ್ರ ಅವಕಾಶ

ತಿರುವನಂತಪುರಂ(ಕೇರಳ) : ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ನವೆಂಬರ್​ 16ದಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ.
ಪ್ರತಿದಿನ 25 ಸಾವಿರ ಭಕ್ತಾಧಿಗಳಿಗೆ ದರ್ಶನ ಪಡೆದುಕೊಳ್ಳಲು ಅವಕಾಶ ನೀಡಲಾಗುವುದು ಎಂದು ದೇವಾಲಯದ ಅಧ್ಯಕ್ಷರು ತಿಳಿಸಿದ್ದಾರೆ. ಎರಡು ತಿಂಗಳ ವಾರ್ಷಿಕ ಧಾರ್ಮಿಕ ಯಾತ್ರೆಯ ಅವಧಿ ಆರಂಭಗೊಂಡಿರುವ ಕಾರಣ, ಪ್ರತಿದಿನ 25 ಸಾವಿರ ಭಕ್ತರಿಗೆ ಅವಕಾಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ನವೆಂಬರ್​ 16ರಿಂದ ಧಾರ್ಮಿಕ ಯಾತ್ರೆ ಆರಂಭಗೊಳ್ಳಲಿದ್ದು, ನವೆಂಬರ್​ 15ರ ಸಂಜೆ 5ಕ್ಕೆ ದೇವಾಲಯದ ಬಾಗಿಲುತೆರೆಯಲಿದೆ. ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದ್ದು, ಭೇಟಿ ನೀಡಲು ಎರಡು ಡೋಸ್​ ಕೋವಿಡ್​ ಲಸಿಕೆ( ಪಡೆದಿರಬೇಕು ಅಥವಾ ಆರ್​ಟಿಪಿಸಿಆರ್ ನೆಗೆಟಿವ್​ ವರದಿ ಹೊಂದಿರುವುದು ಕಡ್ಡಾಯವಾಗಿದೆ.
ವರ್ಚುವಲ್​ ಕ್ಯೂ ಸಿಸ್ಟಿಮ್​ ಮೂಲಕ ಸ್ಲಾಟ್​ ಬುಕ್ ಮಾಡಿಕೊಳ್ಳಬಹುದು. ಪಂಪಾ ನದಿಯಲ್ಲಿ ಸ್ನಾನಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ತಮಿಳುನಾಡು, ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಂದ ಬರುವ ಭಕ್ತರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement