ಪುನೀತ್​ ಕಣ್ಣುಗಳಿಂದ ಇನ್ನೂ ಹತ್ತು ಜನಕ್ಕೆ ದೃಷ್ಟಿ ನೀಡಲು ನಾರಾಯಣ ನೇತ್ರಾಲಯದಿಂದ ಪ್ರಯೋಗ

ಬೆಂಗಳೂರು: ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಎರಡು ವಾರಗಳೇ ಕಳೆದಿವೆ. ಈ ಮಧ್ಯೆ ಪುನೀತ್‌ ಅವರು ಸಾವಿನಲ್ಲೂ ಮಾದರಿಯಾಗಿದ್ದು ಅವರು ದಾನ ಮಾಡಿದ ಕಣ್ಣು ಈಗ 10 ಅಂಧರಿಗೆ ಬೆಳಕಾಗಲಿದೆ.
ಈಗ ನಾರಾಯಣ ನೇತ್ರಾಲಯವು ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದು, ಪುನೀತ್ ಅವರ ಕಣ್ಣಿನಿಂದ ಇನ್ನೂ 10 ಜನಕ್ಕೆ ದೃಷ್ಟಿ ನೀಡಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿಯಾ ಕಾರ್ನಿಯಾ ಹಾಗೂ ಸ್ಟೆಮ್ ಸೆಲ್ ಎರಡನ್ನೂ ಬಳಸಿ ಅಂಧರಿಗೆ ದೃಷ್ಟಿ ನೀಡಲು ನಾರಾಯಣ ನೇತ್ರಾಲಯ ಮುಂದಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ 10 ದಿನದಲ್ಲಿ 10ಕ್ಕೂ ಹೆಚ್ಚು ಮಂದಿಗೆ ದೃಷ್ಟಿ ಬರಲಿದೆ. ಸ್ಟೆಮ್ ಸೆಲ್ ಗಳಿಂದ ಸ್ಟೆಮ್‌ ಸೆಲ್ ಥೆರಪಿ ಯಶಸ್ವಿಯಾದರೆ ರಾಜ್ಯದ ಮಟ್ಟಿಗೆ ಇದು ಹೊಸ ದಾಖಲೆಯಾಗಲಿದೆ.
ನಾರಾಯಣ ನೇತ್ರಲಯದಲ್ಲಿ ಪುನೀತ್ ಕಣ್ಣಿನ ಸ್ಟೆಮ್ ಸೆಲ್ ಗಳನ್ನ ಅಭಿವೃದ್ಧಿ ಮಾಡುತ್ತಿದ್ದು, ಸ್ಟೆಮ್ ಸೆಲ್​ಗಳು ಮಲ್ಟಿಪಲ್ ಆಗುತ್ತಿವೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಸ್ಟೆಮ್ ಸೆಲ್​ಗಳು ಅಭಿವೃದ್ಧಿ ಹೊಂದಿದ ಬಳಿಕ, ಸ್ಟೆಮ್ ಸೆಲ್‌ನಿಂದಾ ದೃಷ್ಟಿ ಕಳೆದುಕೊಂಡಿದ್ದ ಅಂಧರಿಗೆ ಕಸಿ ಮಾಡಬಹುದಾಗಿದೆ. ಸ್ಟೆಮ್ ಸೆಲ್ ಥೆರಫಿ ಎಂದರೆ, ಪಟಾಕಿ ಸಿಡಿತದಿಂದಾಗಿ ಅಥವಾ ವಂಶವಾಹಿನಿಯಿಂದಾಗಿ ಹಲವು ಜನರಿಗೆ ಅಂಧತ್ವ ಸಮಸ್ಯೆ ಇರುತ್ತದೆ. ಇಂಥಹವರಿಗೆ ಸ್ಟೆಮ್ ಸೆಲ್ ಆಳವಡಿಕೆ ಮಾಡುವುದರಿಂದ ದೃಷ್ಟಿ ನೀಡಬಹುದಾಗಿದ್ದು, ನಾರಾಯಣ ನೇತ್ರಾಲಯವು ಮುಂದಾಗಿದೆ.
ನಾರಾಯಣ ನೇತ್ರಾಲಯದ ನೇತ್ರ ತಜ್ಞ ಡಾ.ಯತೀಶ್ ಹೇಳಿಕೆ ನೀಡಿದ್ದು, ಖಚಿತವಾಗಿ ಇಷ್ಟೇ ಜನರಿಗೆ ಸ್ಟೆಮ್ ಲೇನ್ ಹಾಕಬೇಕು ಎನ್ನುವುದು ಕಷ್ಟ. ಅಪ್ಪುವಿನ ಕಪ್ಪುಗುಡ್ಡೆಯನ್ನ ೪ ಜನರಿಗೆ ಟ್ರಾನ್ಸ್ ಪ್ಲಾಂಟ್ ಮಾಡಿದ್ದೇವೆ. ಕೆಲವರಿಗೆ ಸ್ಟೆಮ್ ಸೆಲ್ ಸಮಸ್ಯೆಯಿರುತ್ತದೆ. ಸ್ಟೆಮ್ ಸೆಲ್ ಕೆಲಸ ಕಪ್ಪುಗುಡ್ಡೆ ರಕ್ಷಣೆ ಮಾಡುವುದು. ಸ್ಟೆಮ್ ಸೆಲ್ ಗಳನ್ನ ಅಭಿವೃದ್ಧಿ ಮಾಡಲಾಗುತ್ತಿದೆ. ಇದರಿಂದ ನಾವು ಸ್ಟೆಮ್ ಸೆಲ್ಸ್ ಗಳಿಂದ ಕಣ್ಣಿನ ದೋಷ ಎದುರಿಸುತ್ತಿರುವ 5 ರಿಂದ 10 ಜನ ಜನರಿಗೆ ದೃಷ್ಟಿ ನೀಡಬಹುದು. ಸ್ಪಮ್ ಸೆಲ್ ಬೆಳವಣಿಗೆಯಾಗಲು ಎರಡು ವಾರ ತಗುಲಿದೆ. ನಂತರ ಸ್ಟಮ್ ಸೆಲ್ ಅಳವಡಿಕೆ ಮಾಡಲಾಗುತ್ತದೆ. ಸಿದ್ಧತೆ ನಡೆಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಬಿಳಿ ಗುಡ್ಡೆ ಮಧ್ಯೆ ಸ್ಟೆಮ್ ಸೆಲ್ಸ್ ಇರುತ್ತದೆ. ಈ ಸ್ಟೆಮ್ ಸೆಲ್ಸ್ ಕಣ್ಣನ್ನು ಸ್ವಚ್ಛವಾಗಿಡಲು ಕೆಲಸ ಮಾಡುತ್ತದೆ. ಸ್ಟೆಮ್ ಸೆಲ್ಸ್ ಡ್ಯಾಮೇಜ್ ಆದರೆ ಕಪ್ಪು ಗುಡ್ಡೆ ಗೆ ಸಮಸ್ಯೆ ಆಗುತ್ತದೆ. ಅಂದರೆ ದೃಷ್ಟಿಯಲ್ಲಿ ಏರುಪೇರಾಗುತ್ತದೆ. ಹೀಗೆ ಸ್ಟೆಮ್ ಸೆಲ್ಸ್ ಡ್ಯಾಮೇಜ್ ಆಗಿರುವ ಜನರಿಗೆ ಈಗ ನಾವು ಇದನ್ನು ಅಳವಡಿಕೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಅಪ್ಪು ಅವರು ಬಹುಮುಖ ಪ್ರತಿಭೆ. ಹೀಗಾಗಿ ಅವರ ಕಣ್ಣುಗಳನ್ನು ಹೆಚ್ಚು ಜನರಿಗೆ ಅಳವಡಿಸಲು ಮುಂದಾಗಿದ್ದೇವೆ. ಅಪ್ಪು ಅವರ ಸ್ಟೆಮ್ ಸೆಲ್ಸ್ ಲ್ಯಾಬ್ನಲ್ಲಿಟ್ಟು ವೃದ್ಧಿ ಪಡಿಸಲಾಗುತ್ತಿದೆ. ಮುಂದಿನ ವಾರದಲ್ಲಿ ಸ್ಟೆನ್ ಸೆಲ್ಸ್ ಅಳವಡಿಕೆ ಆಗಲಿದೆ. ಇದಕ್ಕೆ ಬೇಕಾಗಿರುವ ಜನರನ್ನೂ ಡಾ. ರಾಜ್ ಕುಮಾರ್ ಐ ಬ್ಯಾಂಕ್ ಮೂಲಕ ಪತ್ತೆ ಹಚ್ಚಲಾಗಿದೆ ಎಂದು ಡಾ.ಯತೀಶ್ ಮಾಹಿತಿ ನೀಡಿದ್ದಾರೆ.
ಡಾ.ರಾಜ್ ಕುಮಾರ್ ನೆನಪಿಗಾಗಿ ರಾಜ್ಯದಲ್ಲಿ ಡಾ.ರಾಜಕುಮಾರ್ ಐ ಬ್ಯಾಂಕ್ ಇದೆ. ಡಾ.ರಾಜ್ ಕೂಡ ಸ್ವತಃ ತಮ್ಮ ಕಣ್ಣು ದಾನ ಮಾಡಿದ್ದರು.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement