2020-21ನೇ ಸಾಲಿನ ಶೇ.15 ಬೋಧನಾ ಶುಲ್ಕ ವಾಪಸ್‌ ಮಾಡಲು ಖಾಸಗಿ ಶಾಲೆಗಳಿಗೆ ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: 2020-21 ನೇ ಸಾಲಿನಲ್ಲಿ ಖಾಸಗಿ ಶಾಲೆಗಳು (private school) ಪೂರ್ಣ ಶುಲ್ಕ ಪಡೆದಿದ್ದರೆ, ಹೆಚ್ಚುವರಿ ಶುಲ್ಕವನ್ನು ವಾಪಸ್ ಮಾಡುವಂತೆ ರಾಜ್ಯ ಸರ್ಕಾರ ಖಾಸಗಿ ಶಾಲೆಗಳಿಗೆ ಆದೇಶ ಮಾಡಿದೆ.
ಈ ಹಿಂದೆ ಶುಲ್ಕ ಕಡಿಮೆ ಮಾಡುವಂತೆ ಪೋಷಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. 2020-21 ನೇ ಸಾಲಿನ ಶೇಕಡಾ 30 ರಷ್ಟು ಶುಲ್ಕ(Fees) ಕಡಿತ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇದನ್ನು ಪ್ರಶ್ನಿಸಿದ ಕೆಲ ಖಾಸಗಿ ಶಾಲೆಗಳ ಒಕ್ಕೂಟ ಹೈಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್ ಸರ್ಕಾರದ ಆದೇಶ ಪರಿಷ್ಕರಿಸಿ ಬೋಧನಾ ಶುಲ್ಕದಲ್ಲಿ ಶೇಕಡಾ 15 ರಷ್ಟು ಪಡೆದುಕೊಳ್ಳುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದಂತೆ ಸರ್ಕಾರ ಅಧಿಕೃತವಾಗಿ 2020-21ನೇ ಸಾಲಿನ ಶುಲ್ಕ ಆದೇಶ ಪ್ರಕಟ ಮಾಡಿದೆ. ಆ ಮೂಲಕ ಬೋಧನಾ ಶುಲ್ಕದಲ್ಲಿ ಶೇಕಡಾ 15 ರಷ್ಟು ಪಡೆಯಲು ಆದೇಶಿಸಿದೆ. ಹೊಸ ಆದೇಶದ ಪ್ರಕಾರ ಶೇ.85 ರಷ್ಟು ಶುಲ್ಕವನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.
ಈ ಬಾರಿ ಪೋಷಕರು ಶಾಲೆಗಳಿಗೆ ಎರಡು ಹಂತಗಳಲ್ಲಿ ಶಾಲಾ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ.

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement