ಗಡ್ಚಿರೋಲಿ ಎನ್‌ಕೌಂಟರ್‌ನಲ್ಲಿ 26 ನಕ್ಸಲರ ಜೊತೆ ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಕೂಡ ಹತ

ಮುಂಬೈ: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಿನ್ನೆ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ 26 ನಕ್ಸಲರಲ್ಲಿ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಯೂ ಆಗಿರುವ ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಕೂಡ ಸೇರಿದ್ದಾರೆ ಎಂದು ರಾಜ್ಯ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಭಾನುವಾರ ಖಚಿತಪಡಿಸಿದ್ದಾರೆ.
ನಿನ್ನೆ ಗಡ್‌ಚಿರೋಲಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 26 ನಕ್ಸಲರು ಮೃತಪಟ್ಟಿದ್ದಾರೆ – ಇದರಲ್ಲಿ 20 ಪುರುಷರು ಮತ್ತು 6 ಮಹಿಳೆಯರು ಇದ್ದಾರೆ. ಅದರಲ್ಲಿ ಮಿಲಿಂದ್ ತೇಲ್ತುಂಬ್ಡೆ (ಭೀಮಾ ಕೋರೆಗಾಂವ್ ಪ್ರಕರಣದ ಅಗ್ರ ನಕ್ಸಲ್ ಕಮಾಂಡರ್ ಮತ್ತು ಆರೋಪಿ) ಕೂಡ ಸೇರಿದ್ದಾರೆ ಎಂದು ಗಡ್ಚಿರೋಲಿ ಪೊಲೀಸರು ಖಚಿತಪಡಿಸಿದ್ದಾರೆ,” ಎಂದು ಮಹಾರಾಷ್ಟ್ರ ಗೃಹ ಸಚಿವರು ತಿಳಿಸಿದ್ದಾರೆ. ಈತನ ತಲೆಗೆ 50 ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿತ್ತು.
ಹತರಾದ 26 ನಕ್ಸಲರಲ್ಲಿ ಮಹೇಶ್ ಶಿವಾಜಿ ರಾವ್‌ಜಿ ಗೋಟಾ ತಲೆಗೆ 16 ಲಕ್ಷ ರೂ., ಭಗತ್‌ಸಿಂಗ್‌/ಪ್ರದೀಪ್‌/ತಿಲಕ್‌ ಮಂಕುರ್‌ ಜೇಡ್‌ ಎಂಬವರ ತಲೆಗೆ 6 ಲಕ್ಷ ರೂ., ಲೋಕೇಶ್‌ ಮಂಗು ಪೊದ್ಯಮ್‌ ತಲೆಗೆ 20 ಲಕ್ಷ ರೂ. ಸನ್ನು ಕೊವಾಚಿ ತಲೆಗೆ 8 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಶೋಧನಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಪತ್ತೆಯಾದ ಎಲ್ಲಾ ಶವಗಳ ಪೈಕಿ ಕೆಲವನ್ನು ಗುರುತಿಸಲಾಗಿದೆ, ಇನ್ನೂ ಕೆಲವು ಗುರುತು ಮಾಡಬೇಕಾಗಿದೆ” ಎಂದು ಪಾಟೀಲ್ ಹೇಳಿದರು.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

ಗಡ್ಚಿರೋಲಿ ಎನ್ಕೌಂಟರ್
ಮರ್ಡಿಂತೋಲಾ ಅರಣ್ಯ ಪ್ರದೇಶದ ಕೊರ್ಚಿಯಲ್ಲಿ ಶನಿವಾರ ಬೆಳಗ್ಗೆ ಹೆಚ್ಚುವರಿ ಎಸ್‌ಪಿ ಸೌಮ್ಯಾ ಮುಂಡೆ ನೇತೃತ್ವದಲ್ಲಿ ಸಿ-60 ಪೊಲೀಸ್ ಕಮಾಂಡೋ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಗುಂಡಿನ ಚಕಮಕಿ ನಡೆದಿದೆ.
ಈ ಕಾರ್ಯಾಚರಣೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ನಾಗ್ಪುರಕ್ಕೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
‘ಕೊರ್ಚಿಯ ಗ್ಯಾರಪಟ್ಟಿ-ಕೊಡಗು ಅರಣ್ಯದಲ್ಲಿ ನಕ್ಸಲೀಯರ ಶಿಬಿರವಿದೆ ಎಂಬ ರಹಸ್ಯ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಇದರ ಆಧಾರದ ಮೇಲೆ ಗಡ್‌ಚಿರೋಳಿ ಪೊಲೀಸರ ಸಿ-60 ಘಟಕ ಶನಿವಾರ ಬೆಳಗ್ಗೆ 6 ಗಂಟೆಯಿಂದ ಗ್ಯಾರಪಟ್ಟಿ-ಕೊಡಗು ಅರಣ್ಯದಲ್ಲಿ ಶೋಧ ಕಾರ್ಯ ಆರಂಭಿಸಿದೆ. ಎಂದು ಗಡ್ಚಿರೋಲಿ ಎಸ್ಪಿ ಅಂಕಿತ್ ಗೋಯಲ್ ಹೇಳಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement