ಭಾರತದ ಮೊದಲ ಓಪನ್ ಏರ್ ರೂಫ್‌ಟಾಪ್ ಜಿಯೋ ಡ್ರೈವ್-ಇನ್ ಥಿಯೇಟರ್ ಆರಂಭ..ಕಾರಲ್ಲೇ ಕುಳಿತು ಸಿನೆಮಾ ನೋಡ್ಬಹುದು…!

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನಲ್ಲಿ ಭಾರತದಲ್ಲಿ ಮೊಟ್ಟ ಮೊದಲ ತೆರೆದ ಛಾವಣಿಯ ಡ್ರೈವ್-ಇನ್ ಚಲನಚಿತ್ರ ಮಂದಿರವನ್ನು ಉದ್ಘಾಟಿಸಲಾಗಿದೆ.
ಇದು ದೇಶದ ಮೊದಲ ಓಪನ್ ಥಿಯೇಟರ್ ಆಗಿದ್ದು, ಜಿಯೋ ವರ್ಲ್ಡ್ ಡ್ರೈವ್ ಇನ್ ಮಾಲ್‍ನಲ್ಲಿರುವ ಜಿಯೋ ಡ್ರೈವ್ ಇನ್ ಥಿಯೇಟರ್ ಭಾರತದ ದೊಡ್ಡ ಪರದೆ ಹೊಂದಿದ ಥಿಯೇಟರ್‌‌ಗಳಲ್ಲಿ ಒಂದಾಗಿದೆ.
ಕೊರೊನಾ ವೈರಸ್ ಸಾಂಕ್ರಾಮಿಕದ ನಂತರ ಜಗತ್ತು ಇನ್ನೂ ಹೊಸ ಜೀವನಕ್ಕೆ ಹೊಂದಿಕೊಳ್ಳುತ್ತಿರುವುದರಿಂದ, ಡ್ರೈವ್-ಇನ್ ಥಿಯೇಟರ್ ಅನ್ನು ಚಲನಚಿತ್ರ ಅಭಿಮಾನಿಗಳಿಗೆ ಸುರಕ್ಷಿತವಾದ ಮುಕ್ತ ಸ್ಥಳವಾಗಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸೂರ್ಯವಂಶಿ ಸಿನಿಮಾ ರೂಫ್‍ಟಾಪ್ ಡ್ರೈವ್-ಇನ್ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡಿರುವ ಮೊದಲ ಚಲನಚಿತ್ರವಾಗಿದೆ. ಸುಮಾರು 290 ಕಾರ್ ಪಾರ್ಕ್ ಮಾಡುವ ವ್ಯವಸ್ಥೆ. ಸ್ಥಳಾವಕಾಶ ನೀಡಬಹುದಾದ ಡ್ರೈವ್-ಇನ್ ಥಿಯೇಟರ್, ರಿಲಯನ್ಸ್ ರೀಟೈಲ್ ಸಹಭಾಗಿತ್ವದ ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಮಾಲ್ ಇದಾಗಿದೆ.
ಕ್ರಿಸ್ಟಿ ಆರ್‌ಜಿಬಿ ಲೇಸರ್‌ ಪ್ರೊಜೆಕ್ಷನ್‍ನಿಂದ ಸಿನಿಮಾ ಪ್ರದರ್ಶನ ಮಾಡಲಾಗುತ್ತದೆ. ದೇಶದಲ್ಲೇ ಅತೀ ದೊಡ್ಡ ಪ್ರದರ್ಶನ ಪರದೆ ಹೊಂದಿರುವ ಚಿತ್ರ ಮಂದಿರದಲ್ಲಿ 24 ಮೀಟರ್ ಉದ್ದದ ಪರದೆ ಹೊಂದಿದೆ. 290 ಕಾರ್ ಪಾರ್ಕ್ ಮಾಡಿ ನೋಡುವ ವ್ಯವಸ್ಥೆ ಇದ್ದು ಪ್ರತಿ ಕಾರಿಗೆ 1,200 ರೂ. ಟಿಕೆಟ್ ಶುಲ್ಕವಾಗಿರುತ್ತದೆ. ನಾಲ್ಕು ಮಂದಿ ಮಾತ್ರ ವಾಹನದಲ್ಲಿ ಕುಳಿತು ಸಿನಿಮಾ ನೋಡಬಹುದಾಗಿದೆ.

ಪ್ರಮುಖ ಸುದ್ದಿ :-   ಅಧಿಕಾರಿಯನ್ನು ಕಚೇರಿಯಿಂದ ಹೊರಗೆಳೆದು ಥಳಿತ, ಮುಖಕ್ಕೆ ಒದ್ದು ಹಲ್ಲೆ : ಮೂವರ ಬಂಧನ-ದೃಶ್ಯ ಸಿಸಿಟಿವಿಯಲ್ಲಿ ಸೆರೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement