ಕೆಆರ್ ಪೇಟೆ: ರಾತ್ರಿ ಸುರಿದ ಭಾರೀ ಮಳೆಯಿಂದ ಪ್ರವಾಹಕ್ಕೆ ಕೆ. ಆರ್. ಪೇಟೆ ತಾಲೂಕು ಶೀಳನೆರೆ ಹೋಬಳಿ ಹುಣಸನಹಳ್ಳಿ ಹೆಚ್ ಬಳ್ಳೇಕೆರೆ ಗ್ರಾಮಕ್ಕೆ ಹಾದು ಹೋಗುವ ರಸ್ತೆ ಕೊಚ್ಚಿಕೊಂಡು ಹೋಗಿದೆ.
ಇದೇ ಸಮಯದಲ್ಲಿ ಕಾರೊಂದು ಈ ರಸ್ತೆಯ ಕೊಚ್ಚಿಹೋದ ಭಾಗದಲ್ಲಿ ತಲೆಕೆಳಗಾಗಿ ಬಿದ್ದು ಸಿಲುಕಿಕೊಂಡಿದೆ. ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರಾಗಿದ್ದಾರೆ ಎಂದು ಆದೋಲನ.ಇನ್ ವರದಿ ಮಾಡಿದೆ.
ಮಳೆಯ ನೀರಿನ ರಭಸಕ್ಕೆ ರಸ್ತೆಯ ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗಿ ಭತ್ತದ ಬೆಳೆಯು ಕೊಚ್ಚಿಕೊಂಡು ಹೋಗಿ ಅಪಾರ ನಷ್ಟ ಉಂಟಾಗಿದೆ. ಎಡಬಿಡದೆ ಸುರಿಯುತ್ತಿರುವುದರಿಂದ ತಾಲ್ಲೂಕಿನ ಅನೇಕ ಮನೆಗಳು ಕುಸಿತವಾಗಿವೆ, ಬೆಳೆಗಳು ಕೊಚ್ಚಿಹೋಗಿವೆ. ಇದರಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿರುವುದರಿಂದ ತಾಲೂಕು ಆಡಳಿತ ಹಾಗೂ ಸಂಬಂಧಿಸಿದ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು (ಪರಿಹಾರ) ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ