ಪೇಜಾವರ ಶ್ರೀಗಳ ಕುರಿತು ಟೀಕಾತ್ಮಕ ಹೇಳಿಕೆ: ತೀವ್ರ ಆಕ್ರೋಶದ ನಂತರ ಕ್ಷಮೆಯಾಚಿಸಿದ ಹಂಸಲೇಖ

ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ಸಂಯೋಜಕ ಮತ್ತು ಸ್ಕ್ರಿಪ್ಟ್ ರೈಟರ್ ಹಂಸಲೇಖ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರನ್ನು ಉಲ್ಲೇಖಿಸುವಾಗ ಮಾಡಿದ ಕೆಲವು ಟೀಕೆಗಳು ಬಿರುಗಾಳಿಯೆಬ್ಬಿಸಿ ಭಾರೀ ಟೀಕೆಗಳು ವ್ಯಕ್ತವಾದ ನಂತರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಂಸಲೇಖ ದಲಿತರ ಮನೆಯಲ್ಲಿ ಪೇಜಾವರ ಶ್ರೀಗಳು ಹೋಗಿ ಕುಳಿತರೆಂದು ಸುದ್ದಿಯಾಗುತ್ತದೆ. ಆದರೆ ಅವರ ಮನೆಯವರು ಕೊಟ್ಟ ಕೋಳಿ ತಿನ್ನುವುದಕ್ಕಾಗುತ್ತಾ? ಮಾಂಸ ಕೊಟ್ಟರೆ ತಿನ್ನುವುದಕ್ಕಾಗುತ್ತಾ ? ದಲಿತರ ಮನೆಗೆ ಹೋಗುವುದು ಯಾವ ದೊಡ್ಡ ವಿಷಯ ಎಂದು ಹೇಳುವ ಮೂಲಕ ಮೂಲಕ ವಿವಾದ ಸೃಷ್ಟಿಸಿದ್ದರು. ಈಗ ಈ ಬಗ್ಗೆ ಕ್ಷಮೆಯಾಚಿಸಿದ ವಿಡಿಯೊ ಬಿಡುಗಡೆ ಮಾಡಿದ್ದಾರೆ.
ಆರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಿದ್ದರು. ಅದೀಗ ಗೀಳಾಗಿ ಹೋಗಿದೆ. ಅಶ್ವತ್ಥ ನಾರಾಯಣ, ಅಶೋಕ್‌ ಕೂಡ ಗ್ರಾಮ ವಾಸ್ತವ್ಯ ಮಾಡಿದ್ದಾರೆ ಎಂದು ಅವರು ನೀಡಿದ ಹೇಳಿಕೆ ಕೂಡ ವೈರಲ್‌ ಆಗಿದೆ.
ಹಂಸಲೇಖ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಅವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಅವರು ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಯಾಚನೆ ಮಾಡಿದ್ದಾರೆ. ಎಲ್ಲಾ ಮಾತುಗಳು ವೇದಿಕೆ ಅಲ್ಲ, ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ತಪ್ಪಾಗಿ ಮಾತನಾಡಿದ್ದೇನೆ. ಅಸ್ಪೃಶ್ಯತೆ ದೇಶಕ್ಕಂಟಿದ್ದ ಶಾಪ, ಈ ಶಾಪವನ್ನು ಹೊಡೆದೋಡಿಸಲು ಪೇಜಾವರ ಶ್ರೀಗಳು ಶ್ರಮಿಸಿದ್ದಾರೆ. ಅದರ ಬಗ್ಗೆ ನನಗೆ ಗೌರವವಿದೆ. ಭಾರತದಲ್ಲಿ ಅದು ಕರಗಿ ಮಾಯವಾಗುತ್ತಿದೆ. ನಾನು ಅಲ್ಲಿ ಆಡಿದ ಮಾತು ನನ್ನ ಪತ್ನಿಗೆ ಸಹ ಇಷ್ಟವಾಗಲಿಲ್ಲ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ, ನನ್ನ ಪತ್ನಿ ಕ್ಷಮೆ ಯಾಚಿಸುತ್ತೇನೆ. ನನಗೆ ಯಾರ ಮನಸ್ಸನ್ನೂ ನೋಯಿಸುವ ಮನಸ್ಸಿಲ್ಲ. ನಾನೊಬ್ಬ ಸಂಗೀತಕಾರ ನನಗ್ಯಾಕೆ ಈ ಟ್ರೋಲ್‌ ಎಂದು ಹಂಸಲೇಖ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement