ಮುಂಡಗೋಡ: ಕೆರೆಗೆ ಉರುಳಿದ ಕಾರು, ಅಂತ್ಯಕ್ರಿಯೆಗೆ ಹೊರಟ ದಂಪತಿ ದುರ್ಮರಣ

ಮುಂಡಗೋಡ: ಪಟ್ಟಣದ ಬಳಿಯ ಅಮ್ಮಾಜಿ ಕೆರೆಯಲ್ಲಿ ಕಾರೊಂದು ಮುಳುಗಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ದಂಪತಿ ಮೃತಪಟ್ಟ ಘಟನೆ ವರದಿಯಾಗಿದೆ.
ಈ ಘಟನೆ ಇಂದು (ಸೋಮವಾರ) ಬೆಳಗಿನ ಜಾವ ನಡೆದಿದ್ದು, ಮೃತ ದಂಪತಿಯನ್ನು ರಾಜು ವರ್ಗೀಸ್ ಹಾಗೂ ಬ್ಲೆಸ್ಸಿ ರಾಜು ಎಂದು ಗುರುತಿಸಲಾಗಿದೆ. ಇಬ್ಬರು ಮೂಲತಃ ಅರಿಶಿಣಗೇರಿಯವರು ಎಂದು ಹೇಳಲಾಗಿದ್ದು,  ಹಾಲಿ  ಬೆಂಗಳೂರಿನಲ್ಲಿ ನೆಲೆಸಿದ್ದರು.

ಕರವಳ್ಳಿಯಲ್ಲಿ ಸಂಬಂಧಿಕರೊಬ್ಬರು ತೀರಿಕೊಂಡಿದ್ದರಿಂದ ಅವರ ಅಂತ್ಯಕ್ರಿಯೆ ಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಬರುತ್ತಿರುವಾಗ, ಅಮ್ಮಾಜಿ ಕೆರೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ನೀರಿನಲ್ಲಿ ಮುಳುಗಿದೆ. ಇಬ್ಬರೂ ಮೃತಪಟ್ಟಿದ್ದಾರೆ.
ಸಿಪಿಐ ಸಿದ್ಧಪ್ಪ ಸಿಮಾನಿ, ಪಿಎಸ್‍ಐ ಬಸವರಾಜ ಮಬನೂರ, ಪಿಎಸ್‍ಐ ಎನ್.ಡಿ.ಜಕ್ಕಣ್ಣವರ್, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮೃತದೇಹ ಹಾಗೂ ಕಾರು ಹೊರತೆಗೆದಿದ್ದಾರೆ.

5 / 5. 2

ಪ್ರಮುಖ ಸುದ್ದಿ :-   ಕರ್ಣಾಟಕ ಬ್ಯಾಂಕ್‌ ಎಂಡಿ-ಸಿಇಒ, ಕಾರ್ಯನಿರ್ವಾಹಕ ನಿರ್ದೇಶಕ ರಾಜೀನಾಮೆ

ನಿಮ್ಮ ಕಾಮೆಂಟ್ ಬರೆಯಿರಿ

advertisement