ಆಘಾತಕಾರಿ ಘಟನೆ…10 ತಿಂಗಳ ಹಸುಳೆ ಮೇಲೆ ಮನೆಕೆಲಸದವನಿಂದ ಅತ್ಯಾಚಾರ..!

ಲಕ್ನೋ: ಆಘಾತಕಾರಿ ಘಟನೆಯೊಂದರಲ್ಲಿ, ಮನೆಯ ಕೆಲಸದನಿಂದ ಹತ್ತು ತಿಂಗಳ ಮಗುವಿನ ಮೇಲೆ ಅತ್ಯಾಚಾರ ನಡೆದ ಘಟನೆ ಬೆಳಕಿಗೆ ಬಂದಿದೆ.
ಮಗುವನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಪೀಡಿಯಾಟ್ರಿಕ್ ಸರ್ಜರಿ ವಿಭಾಗಕ್ಕೆ ದಾಖಲಿಸಲಾಗಿದೆ. ಮಗುವಿನ ಖಾಸಗಿ ಅಂಂಆಂಗಗಳಿಗೆ ಹಾನಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಭಾನುವಾರ ರಾತ್ರಿ ಸಾದತ್‌ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಾಲಕಿಯ ತಾಯಿ ಅಡುಗೆಮನೆಯಲ್ಲಿದ್ದಾಗ ತನ್ನ ಮಗುವಿನ ಅಳುವುದನ್ನು ಕೇಳಿ ಮಲಗುವ ಕೋಣೆಗೆ ಧಾವಿಸಿದಾಗ ಮನೆಯ ಸಹಾಯಕ ಸನ್ನಿ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ. ಅವಳನ್ನು ನೋಡಿದವನೇ ಆತ ಓಡಿಹೋಗಿದ್ದಾನೆ.
ನಂತರ ಕುಟುಂಬದವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಸೋಮವಾರ ಬಂಧಿಸಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಾದತ್‌ಗಂಜ್ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಬ್ರಿಜೇಶ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಪ್ರೊ.ಜೆ.ಡಿ.ರಾವತ್ ಮಾತನಾಡಿ, ‘‘ಘಟನೆಯಿಂದ ಮಗುವಿನ ಖಾಸಗಿ ಜನನಾಂಗಗಳಿಗೆ ಹಾನಿಯಾಗಿದೆ, ಆದರೆ ಮಗುವಿಗೆ ಪ್ರಜ್ಞೆ ಇದೆ. ಆದರೆ, ಮೂತ್ರ ವಿಸರ್ಜನೆ ಸಮಯದಲ್ಲಿ ತೊಂದರೆಯಾಗಿದೆ. ಚಿಕಿತ್ಸೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾವು ಅವಳನ್ನು ಹೆಚ್ಚಿನ ಪರೀಕ್ಷೆಗಾಗಿ ಅರಿವಳಿಕೆಗೆ ಒಳಪಡಿಸುತ್ತೇವೆ ಮತ್ತು ಸೋಂಕು ಕಡಿಮೆಯಾದ ನಂತರವೇ, ಅಗತ್ಯವಿದ್ದರೆ, ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಪೇಟಿಎಂ ಸಿಇಒ ಸ್ಥಾನಕ್ಕೆ ಭವೇಶ ಗುಪ್ತಾ ದಿಢೀರ್‌ ರಾಜೀನಾಮೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement