ಕಲಬುರಗಿ ಪಾಲಿಕೆ ಮೇಯರ್ -ಉಪಮೇಯರ್‌ ಚುನಾವಣೆ ಮುಂದೂಡಿಕೆ

ಕಲಬುರಗಿ: ರಾಜ್ಯದ ಗಮನ ಸೆಳೆದಿದ್ದ ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರ- ಉಪಮಹಾಪೌರ ಚುನಾವಣೆ ಈಗ ಮುಂದೂಡಲಾಗಿದೆ.
ಮೇಐರ್‌ ಹಾಗೂ ಉಪಮೇಯರ್‌ ಚುನಾವಣೆ ಇದೇ ಇದೇ ನವೆಂಬರ್‌ 20ರಂದು ನಿಗದಿಯಾಗಿತ್ತು. ಈಗ ಚುನಾವಣೆ ಮುಂದೂಡಿ ಪ್ರಾದೇಶಿಕ ಆಯುಕ್ತರು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಜಿಲ್ಲಾಡಳಿತ ಕಾರ್ಯನಿರತವಾಗಿದ್ದರಿಂದ ಚುನಾವಣೆ ಮುಂದೂಡಿರುವುದಾಗಿ ಪ್ರಾದೇಶಿಕ ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಅತಂತ್ರ ಫಲಿತಾಂಶ ಬಂದಿದೆ. ಪಾಲಿಕೆಯಲ್ಲಿ ಕಾಂಗ್ರೆಸ್ 27 ಬಿಜೆಪಿ 23 ಹಾಗೂ ಜೆಡಿಎಸ್ ನಾಲ್ಕು ಹಾಗೂ ಓರ್ವ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ. ಹೀಗಾಗಿ ಅಧಿಕಾರದ ಗದ್ದುಗೆ ಹಿಡಿಯಲು ಹಗ್ಗಜಗ್ಗಾಟ ನಡೆದಿದೆ.
ಇದೇ ನ.18ರಂದು ನಿಗದಿಯಾಗಿದ್ದ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ- ಉಪಮೇಯರ್ ಚುನಾವಣೆ ಸಹ ಮುಂದೂಡಿಕೆಯಾಗಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement