ಬಿಬಿಎಂಪಿ ಕಟ್ಟಡಗಳ ಮೇಲೆ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ: ರಾಜ್ಯದಲ್ಲಿ ಪ್ರಪ್ರಥಮ ಪ್ರಯೋಗ

ಬೆಂಗಳೂರು: ರಾಜ್ಯದಲ್ಲೇ ಪ್ರಪ್ರಥಮ ಪ್ರಯೋಗ ಎನ್ನುವಂತೆ ಬಿಬಿಎಂಪಿ ಕಟ್ಟಡಗಳ ಮೇಲೆಯೂ ಸೋಲಾರ್ ವಿದ್ಯುತ್ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ.
ಇಂದು ರಾಜಾಜಿನಗರ ಕ್ಷೇತ್ರದ ಬಿಬಿಎಂಪಿ ಕಟ್ಟಡದ ಮೇಲೆ ಸೋಲಾರ್ ವಿದ್ಯುತ್ ಘಟಕವನ್ನು ಮಾಜಿ ಸಚಿವ ಎಸ್. ಸುರೇಶಕುಮಾರ್ ಲೋಕಾರ್ಪಣೆ ಮಾಡಿದರು. ಈ ಘಟಕಗಳನ್ನು ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದಡಿ ನಿರ್ಮಾಣ ಮಾಡಲಾಗಿದೆ.
ಈ ಬಳಿಕ ಮಾತನಾಡಿ ಅವರು, ಇದು ರಾಜ್ಯದಲ್ಲಿಯೇ ಪ್ರಾಯಶಃ: ಇದು ಈ ರೀತಿಯ ಪ್ರಪ್ರಥಮ ಪ್ರಯೋಗವಾಗಿದೆ. ಸುಮಾರು 40 ಲಕ್ಷ ರೂ.ಗಳ ವೆಚ್ಚದಲ್ಲಿ ಈ ಸೋಲಾರ್ ವಿದ್ಯುತ್ ಘಟಕವನ್ನು ರಾಜ್ಯ ಸರ್ಕಾರದ ಅಂಗಸಂಸ್ಥೆಯಾದ ಎಂಎಸ್‌ಐಎಲ್ ಸಂಸ್ಥೆಯು ಅಳವಡಿಸಿದೆ ಎಂದು ಮಾಹಿತಿ ನೀಡಿದರು.ಸದ್ಯಕ್ಕೆ 40 ಕಿಲೋವಾಟ್ ವಿದ್ಯುತ್ತನ್ನು ಉತ್ಪಾದಿಸುವ ಸಾಮರ್ಥ್ಯವುಳ್ಳ ಸೌರಶಕ್ತಿಯ ಉಪಕರಣಗಳನ್ನು ಅಳವಡಿಸಲಾಗಿದೆ ಎಂದರು.
ದಿನಕ್ಕೆ ಸುಮಾರು 160 ರಿಂದ 200 ಯೂನಿಟ್ ಗಳವರೆಗೆ ವಿದ್ಯುತ್ ಉತ್ಪಾದನೆಯಾಗಲಿದೆ. ಮೊದಲ ಹಂತದಲ್ಲಿ ಬಿಬಿಎಂಪಿ ಇಂಜಿನಿಯರಿಂಗ್, ಆರೋಗ್ಯ ಹಾಗೂ ರೆವಿನ್ಯೂ ಕಚೇರಿಗಳಿಗೆ ವಿದ್ಯುತ್ತನ್ನು ನೀಡಲಾಗುತ್ತದೆ. ರಜೆ ದಿನಗಳು, ಎರಡನೇ ಹಾಗೂ ನಾಲ್ಕನೇ ಶನಿವಾರ, ಭಾನುವಾರಗಳು. ಈ ದಿನಗಳಲ್ಲಿ ಉಳಿತಾಯವಾಗುವ ವಿದ್ಯುತ್ತನ್ನು ಬೆಸ್ಕಾಂ ಗ್ರಿಡ್ ಗೆ ಸರಬರಾಜು ಮಾಡಲಾಗುತ್ತದೆ ಎಂದು ಹೇಳಿದರು.
ಇದರಿಂದ ಪ್ರತಿ ತಿಂಗಳು ಸುಮಾರು 48 ಸಾವಿರ ರೂಗಳು ಉಳಿತಾಯವಾಗುತ್ತದೆ. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು 25 ವರ್ಷಗಳ ಕಾಲ ಖರೀದಿಸುವುದಾಗಿ ಬೆಸ್ಕಾಂ ಸಂಸ್ಥೆಯು ಎಂಎಸ್‌ಐಎಲ್ ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಸೌರಶಕ್ತಿ ವಿದ್ಯುತ್ ಘಟಕದ ನಿರ್ವಹಣೆಯನ್ನು ಐದು ವರ್ಷಗಳ ಕಾಲ ಎಂಎಸ್‌ಐಎಲ್ ಸಂಸ್ಥೆ ನೋಡಿಕೊಳ್ಳಲಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ರಾಜ್ಯದ ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement