ಯಾದಗಿರಿ : ನೇತ್ರದಾನಕ್ಕೆ ಮುಂದಾದ 39 ಯುವಕರು..!.

ಯಾದಗಿರಿ : ಜಿಲ್ಲೆಯ ಗುರುಮಟಕಲ್ ಕ್ಷೇತ್ರದ 39 ತಯವಕರು ತಮ್ಮ ನೇತ್ರಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಪುನೀತ ರಾಜಕುಮಾರ ಮರಣದ ನಂತರ ತಮ್ಮ ನೇತ್ರಗಳನ್ನು ದಾನ ಮಾಡಿದ ಪ್ರೇರಣೆಗೆ ಒಳಗಾದ 39 ಯುವಕರು ಜೆಡಿಎಸ್ ಯುವ ನಯಕ ಶರಣಗೌಡರ ಜನ್ಮದಿನದ ನೆನಪಿಗಾಗಿ ಕಲಬುರಗಿಯ ಹೆಚ್‌ಕೆಇ ಸೊಸಾಯಿಟಿಯ ಐ ಬ್ಯಾಂಕ್‌ಗೆ 39 ಜನ ನೇತ್ರದಾನ ಮಾಡುವುದಾಗಿ ಒಪ್ಪಿಗೆ ಪತ್ರಕ್ಕೆ ಬುಧವಾರ ಸಹಿ ಹಾಕಿದ್ದಾರೆ.
ಗುರುಮಠಕಲ್ ಮತಕ್ಷೇತ್ರದ ಗೊಂದೆಡಗಿ ಗ್ರಾಮದಲ್ಲಿ ಟೀಂ ಎಸ್‌ಎನ್‌ಕೆ ವತಿಯಿಂದ ಸೂರು ಇಲ್ಲದ ಭೀಮಣ್ಣ ಎಂಬುವವರಿಗೆ ಹೊಸ ಮನೆಯನ್ನು ಕಟ್ಟಿಸಿಕೊಡಲಾಗಿದ್ದು, ಈ ಮನೆಯ ಗೃಹ ಪ್ರವೇಶ ಕಾರ್ಯವನ್ನು ಜೆಡಿಎಸ್ ಯುವ ನಾಯಕ ಶರಣಗೌಡ ಕಂದಕೂರ ಜನ್ಮದಿನವಾದ ಬುಧವರಾ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಯುವಕರು ತಮ್ಮ ನೇತ್ರದಾನ ಮಾಡುವುದಾಗಿ ಘೋಷಣೆ ಮಾಡಿದರು.
ನೇತ್ರದಾನಿಗಳು : ಯುವ ಮುಖಂಡ ಅಜಯರೆಡ್ಡಿ ಯಲೇರಿ, ಮೈಹಿಪಾಲರೆಡ್ಡಿ ಪಗಲಾಪೂರ, ಜಗದೀಶ ಉಪ್ಪರ ಬೆಳಗುಂದಿ, ರಾಘವೇಂದ್ರ ಸೈದಾಪೂರ, ಸೌಭಾಗ್ಯಮ್ಮ ಸೈದಾಪೂರ, ಶ್ರೀಮತಿ ಕನಿಕ ಅಜಯರೆಡ್ಡಿ ಯಲೇರಿ, ಚೌಡಯ್ಯ ಚಾಮನಳ್ಳಿ, ಕಾಳಬೆಳಗುಂದಿ, ಯಂಕೋಬಾ ತುರಕನದೊಡ್ಡಿ, ಗುರುರಾಜ ಕುಲಕರ್ಣಿ ಖಾನಾಪೂರ, ನರಸಪ್ಪ ಕವಡೆ ಬದ್ದೇಪಲ್ಲಿ, ಪರಶುರಾಮ ಮುಸ್ಟೂರಕರ್ ಯಾದಗಿರಿ, ಶರಣಪ್ಪಗೌಡ ನಡುವಿನಮನಿ ಸೈದಾಪುರ, ಗುರುಲಿಂಗಪ್ಪ ನಡುವಿನಮನಿ, ಚಂದ್ರುಗೌಡ ಮಾಲಿ ಪಾಟೀಲ್, ಸೈದಾಪೂರ, ಶರಣಗೌಡ ಕ್ಯಾತನಾಳ, ಶರಣಬಸವ ಕುಡ್ಲೂರು, ಶರಣಗೌಡ ಮಾಲಿಪಾಟೀಲ್ ಮಾಧ್ವಾರ, ಲಕ್ಷ್ಮಣ ನಾಯಕ ಕುಡ್ಲೂರು, ಸಾಗರ ಹುಲ್ಲೇರ, ಸೈದಾಪೂರ, ವಿಜಯಕುಮಾರ ಇಡ್ಲೂರು, ಆನಂದರೆಡ್ಡಿ ವಡವಟ್, ಮಲ್ಲಿಕಾರ್ಜುನ ಅರುಣಿ ಗಾಜರಕೋಟ, ಸಿದ್ದರೆಡ್ಡಿ, ಸಾ:ಗೊಂದಡಗಿ, ನಾಗರಾಜ ಅಡುಕಯ್ಯೋರ್ ಸಂಗ್ವಾರ, ಮಹೇಶ, ರಾಚನಹಳ್ಳಿ, ಅಲ್ಲಾವುದ್ದೀನ್ ನೀಲಹಳ್ಳಿ, ದೇವು ಘಂಟಿ ಬಾಡಿಯಾಳ, ಬಂದೇಶ ಪಾಟೀಲ್, ಸಾ:ಭೀಮನಹಳ್ಳಿ, ರಾಜೇಶಟಿ.ಶಟ್ಟಿ ಸೈದಾಪೂರ, ಶಿವಕುಮಾರ ಪಾಟೀಲ್ ಸೈದಾಪೂರ, ಬಸಲಿಂಗಪ್ಪ ಸೈದಾಪುರ. ನೇತ್ರದಾನಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಎಲ್ಲರೆದುರು ಸರ್ಪಕ್ಕೆ ಮುತ್ತಿಕ್ಕಿದ ಭೂಪ...ಆದ್ರೆ ನಂತರ ಆದದ್ದೇ ಬೇರೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement