ಶಬರಿಮಲೆ ದರ್ಶನಕ್ಕೆ ಬರೋಬ್ಬರಿ 13 ಲಕ್ಷ ಭಕ್ತರಿಂದ ನೋಂದಣಿ

ಶಬರಿಮಲೆ : ಶಬರಿಮಲೆ ಶ್ರೀ ಅಯ್ಯಪ್ಪನ ದರ್ಶನಕ್ಕೆ ಮಂಡಲ ಮರಕವಿಳಕ್ಕು ಯಾತ್ರೆ ಆರಂಭಗೊಂಡಿದೆ. ಈ ಬಾರಿ ಅಯ್ಯಪ್ಪನ ದರ್ಶನಕ್ಕೆ ಬರೋಬ್ಬರಿ 13 ಲಕ್ಷ ಭಕ್ತರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಯಾತ್ರೆಗೆ ಮಳೆಯ ಭೀತಿ ಎದುರಾಗಿದ್ದು, ಈ ಬಗ್ಗೆ ಆತಂಕ ಬೇಡ ಎಂದು ಕೇರಳ ಸರ್ಕಾರ ಹೇಳಿದೆ.
ಶಬರಿಮಲೆಯಲ್ಲಿ ಸಭೆ ನಡೆಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ ಸರ್ಕಾರದ ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್‌, ಈ ಬಾರಿಯ ಶಬರಿಮಲೆ ಯಾತ್ರೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಎಲ್ಲಾ ಭಕ್ತರಿಗೆ ಶಬರಿಮಲೆ ದರ್ಶನಕ್ಕ ಬೇಕಾದ ಸಕಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಭಕ್ತರು ಕೂಡ ಆತಂಕ ಪಡುವುದು ಬೇಡ ಎಂದು ಭರವಸೆ ನೀಡಿದ್ದಾರೆ.
ಈಗ ಮಂಡಲ ಮರಕವಿಳಕ್ಕು ಯಾತ್ರೆ ಆರಂಭಗೊಂಡಿದೆ. ಆದರೆ ಕೇರಳದಲ್ಲಿ ಭಾರೀ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಭಾರೀ ಮಳೆಯಿಂದಾಗಿ ಪಂಪಾನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಹೀಗಾಗಿ ಅಯ್ಯಪ್ಪ ಭಕ್ತರು ಪಂಪಾ ನದಿಗೆ ಇಳಿಯವುದನ್ನು ನಿಷೇಧಿಸಲಾಗಿದೆ. ಭಕ್ತರು ನೀಲಿಮಲೆ ಹಾಗೂ ಅಪಾಚೆಮೇಡುವಿನ ಸಾಂಪ್ರದಾಯಿಕ ಮಾರ್ಗದ ಮೂಲಕ ಶಬರಿಮಲೆ ರಸ್ತೆ ಮಾರ್ಗವನ್ನು ತೆರೆಯಲಾಗುವುದು. ಅಲ್ಲದೇ ಎರಡು ಆರೋಗ್ಯ ಕೇಂದ್ರಗಳನ್ನು ಈ ಮಾರ್ಗದಲ್ಲಿ ತೆರೆಯಲಾಗುವುದು ಎಂದು ಅವರು ಹೇಳಿದ್ದಾರೆ.
ಮಳೆಯಿಂದಾಗಿ ಭಕ್ತರಿಗೆ ಸಮಸ್ಯೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಎರಡೂ ಮಾರ್ಗಕ್ಕೆ ಬೆಳಕಿನ ವ್ಯವಸ್ಥೆಯ ಜೊತೆಗೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement