ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ತಾಯಿಯಾದ ಬಾಲಿವುಡ್‌ ನಟಿ ಪ್ರೀತಿ ಜಿಂಟಾ

ಮುಂಬೈ: ಬಾಲಿವುಡ್ ನಟಿ ಪ್ರೀತಿ ಜಿಂಟಾ ತಾಯಿಯಾಗಿದ್ದು, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಅವರು ಬಾಡಿಗೆ ತಾಯ್ತನದ (Surrogacy) ಮೂಲಕ ಪ್ರೀತಿ ಜಿಂಟಾ ಹಾಗೂ  ಪತಿ ಜಿನ್ ಗುಡ್​ಎನಾಫ್ ದಂಪತಿ ಅವಳಿ- ಜವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ.
ಮಕ್ಕಳಿಗೆ ಜೈ ಜಿಂಟಾ ಗುಡ್​​ಎನಾಫ್ಹಾಗೂ ಜಿಯಾ ಜಿಂಟಾ ಗುಡ್​​ಎನಾಫ್ ಎಂದು ನಾಮಕರಣ ಮಾಡಲಾಗಿದೆ ಎಂದು ಅವರು ತಮ್ಮ ಟ್ವಿಟ್ಟರ್‌ನಲ್ಲಿ  ಬರೆದುಕೊಂಡಿದ್ದಾರೆ.
ಎಲ್ಲರೊಂದಿಗೆ ಈ ಸಂತಸದ ಸುದ್ದಿಯನ್ನು ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಬಹಳ ಪ್ರೀತಿಯಿಂದ ನಾವು ಜೈ ಜಿಂಟಾ ಗುಡ್​​ಎನಾಫ್ ಹಾಗೂ ಜಿಯಾ ಜಿಂಟಾ ಗುಡ್​ಎನಾಫ್ ಅವ​​ರನ್ನು ಕುಟುಂಬಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ ಎಂದು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಈ ಹೊಸ ಪಯಣಕ್ಕೆ ಬಹಳ ಕಾತರದಿಂದ ಕಾಯುತ್ತಿದ್ದೇವೆ. ಮಕ್ಕಳನ್ನು ಪಡೆಯಲು ನೆರವಾದ ವೈದ್ಯರು, ನರ್ಸ್ ಮತ್ತು ಬಾಡಿಗೆ ತಾಯಿಗೆ (Surrogate) ತುಂಬು ಹೃದಯದ ಕೃತಜ್ಞತೆಗಳನ್ನು ಅವರು ತಿಳಿಸಿದ್ದಾರೆ. ಪ್ರೀತಿ ಜಿಂಟಾ  ಜಿನ್ ಗುಡ್​​ಎನಾಫ್ ಅವರೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ನಂತರ ಈಗ ಸಿನೆಮಾದಿಂದ ದೂರವಾಗಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement