ಹಸುವಿನ ಸಗಣಿ ತಿನ್ನುವ ಹರ್ಯಾಣದ ತಜ್ಞ ವೈದ್ಯ..ಆರೋಗ್ಯಕ್ಕಾಗಿ ತಿಂತೇನೆ ಅಂತಾರೆ….ವೀಕ್ಷಿಸಿ

ಹಸುವಿನ ಸಗಣಿ ಮತ್ತು ಮೂತ್ರವು ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಹೊಂದಿದೆ ಎಂದು ಭಾರತೀಯರು ನಂಬಿದ್ದಾರೆ. ಹಸುವಿನ ಸಗಣಿ ಮತ್ತು ಮೂತ್ರದ ಬಗೆಗಿನ ಅದ್ಭುತ ಪ್ರಯೋಜನಗಳ ಕುರಿತು ಸಾಕಷ್ಟು ವಿಡಿಯೊಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ. ಈಗ ವೈದ್ಯರೊಬ್ಬರು ಹಸುವಿನ ಸಗಣಿ ತಿನ್ನುತ್ತ ಅದು ಮನಸ್ಸು, ದೇಹ ಮತ್ತು ಆತ್ಮವನ್ನು ಶುದ್ಧಗೊಳಿಸುತ್ತದೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೊದಲ್ಲಿ, ಹರಿಯಾಣದ ಕರ್ನಾಲ್‌ನ ಡಾ. ಮನೋಜ್ ಮಿತ್ತಲ್ ಎಂಬವರ ವಿಡಿಯೊ ವೈರಲ್‌ ಆಗಿದೆ. ಗೋವಿನ ಸಗಣಿ ಮತ್ತು ಮೂತ್ರದ ಪ್ರಯೋಜನಗಳ ಬಗ್ಗೆ ಮಾತನಾಡಲು ಗೋಶಾಲೆಯಲ್ಲಿ ನಿಂತಿರುವುದು ಕಂಡುಬರುತ್ತದೆ.
ಅವರು ನೆಲದ ಮೇಲಿದ್ದ ಹಸುವಿನ ಸಗಣಿಯನ್ನು ತೆಗೆದುಕೊಂಡು ತಿನ್ನುವುದನ್ನು ಕಾಣಬಹುದು. ಹಸುವಿನ ಸಗಣಿ ತಿನ್ನುವುದರಿಂದ ನಮ್ಮ ದೇಹ, ಮನಸ್ಸು ಮತ್ತು ಆತ್ಮ ಶುದ್ಧಿಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇನ್ನು ಹೆಂಗಸರು ನಾರ್ಮಲ್ ಡೆಲಿವರಿ ಆಗಬೇಕಾದರೆ ಹಸುವಿನ ಸಗಣಿ ತಿನ್ನಬೇಕು ಎಂದು ಪ್ರತಿಪಾದಿಸುವ ಅವರು ಇದನ್ನು ತಿಂದರೆ ಸಿಸೇರಿಯನ್ ಗೆ ಹೋಗಬೇಕಾಗಿಲ್ಲ, ಗೋಮೂತ್ರದಲ್ಲಿ ಚಿನ್ನವಿದೆ ಎಂದು ಅವರು ಹೇಳುತ್ತಾರೆ. ಅಲ್ಲದೇ ಗೋ ಮೂತ್ರ ಹಾಗೂ ಹಸುವಿನ ಸಗಣಿ ತಿನ್ನುವುದರಿಂದ ಅನೇಕ ಕಾಯಿಲೆಗಳು ದೂರವಾಗುತ್ತದೆ ಎಂದು ತಿಳಿಸಿದ್ದಾರೆ.
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವೈದ್ಯರನ್ನು ಪ್ರಶ್ನಿಸಲು ಆರಂಭಿಸಿದ್ದಾರೆ. ವೈದ್ಯರ ಹೇಳಿಕೆಗಳನ್ನು ಕೆಲವರು ಒಪ್ಪಿದರೆ, ಮತ್ತೆ ಕೆಲವರು ಅವರ ಪದವಿಯನ್ನು ಪ್ರಶ್ನಿಸಿ, ಅಪಹಾಸ್ಯ ಮಾಡಿದ್ದಾರೆ.

ಒಬ್ಬ ಬಳಕೆದಾರ, “ಭಾರತೀಯ ವೈದ್ಯಕೀಯ ಮಂಡಳಿಯು ಇದನ್ನು ಗಮನಿಸಬೇಕು ಮತ್ತು ವೈದ್ಯಕೀಯ ವೃತ್ತಿಯನ್ನು ಅಭ್ಯಾಸ ಮಾಡಲು ಅವರ ಪರವಾನಗಿಯನ್ನು ರದ್ದುಗೊಳಿಸಬೇಕು. ಮಕ್ಕಳ ವೈದ್ಯರಾಗಿ ಅವರು ಸಣ್ಣ ಮುಗ್ಧ ಮಕ್ಕಳಿಗೆ ಗೊಬ್ಬರ ತಿನ್ನಲು ಶಿಫಾರಸು ಮಾಡಬಾರದು.” ಮತ್ತೊಬ್ಬರು “ಓ ದೇವರೇ. ನನಗೆ ಪದಗಳ ಕೊರತೆಯಿದೆ” ಎಂದು ಬರೆದಿದ್ದಾರೆ.
ಮತ್ತೊಬ್ಬರು, “ಡಾಕ್ಟರ್ ಅಂಕಲ್ ನೆ ಗೋಬರ್ ಕೆ ಉಪರ್ ಚೀಸ್, ಬೆಣ್ಣೆ, ಚಾಕೊಲೇಟ್ ಘಿಸ್ ಲೇನಾ ಥಾ” ಎಂದು ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಹಸುಗಳು ಮತ್ತು ಅವುಗಳ “ಮಲವಿಸರ್ಜನೆ” ಉತ್ತಮ ಆರ್ಥಿಕ ಸಾಮರ್ಥ್ಯವನ್ನು ಹೊಂದಿದ್ದು, ಅವು ರಾಜ್ಯ ಮತ್ತು ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಗೋವುಗಳು, ಅವುಗಳ ಸಗಣಿ ಮತ್ತು ಮೂತ್ರದಿಂದ ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ರಾಜ್ಯ ಹಾಗೂ ದೇಶದ ಆರ್ಥಿಕತೆಯನ್ನು ಸದೃಢಗೊಳಿಸಲು ಸಹಕಾರಿಯಾಗಬಹುದು, ಮುಂದೊಂದು ದಿನ ನಾವು ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement