ಕಾರ್ತಿಕ ಮಾಸ ಮುಗಿಯವ ವರೆಗೂ ಮಳೆಗಾಲ ಇರಲಿದೆ: ಕೋಡಿಮಠದ ಶ್ರೀಗಳ ಭವಿಷ್ಯ

ಧಾರವಾಡ: ಕಾರ್ತಿಕ ಮಾಸ ಮುಗಿಯವರೆಗೂ ಮಳೆಗಾಲ ಮುಂದುವರಿಯಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಧಾರವಾಡದಲ್ಲಿ ಇಂದು (ಶುಕ್ರವಾರ) ಮಾಧ್ಯದವರ ಜೊತೆ ಮಾತನಾಡಿದ ಅವರು, ಮಳೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಪ್ರಕೃತಿ ವಿಕೋಪದಿಂದ ಮೆಳೆ ಹೆಚ್ಚಾಗುತ್ತಿದೆ.
ಇನ್ನೂ ಅನಾಹುತವಾಗುವ ಸಾಧ್ಯತೆಯಿದೆ. ಮಳೆ ಕಡಿಮೆಯಾಗಲು ಮಕರ ಸಂಕ್ರಮಣದವರೆಗೂ ಕಾಯಬೇಕು ಎಂದು ಕೋಢಿಮಠದ ಶ್ರೀಗಳು ಹೇಳಿದರು.
ದೈವ ಕೃಪೆಯಿಂದ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದ ಕೋಡಿಮಠದ ಶ್ರೀ ಶಿವಾನಂದ ಶ್ರೀಗಳು ರಾಜಕೀಯ ಬದಲಾವಣೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

5 / 5. 1

ಪ್ರಮುಖ ಸುದ್ದಿ :-   ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜುಲೈ 9ವರೆಗೂ ಭಾರಿ ಮಳೆ ಮುನ್ಸೂಚನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement