ನೋಡುತ್ತಿದ್ದಂತೆಯೇ ಉರುಳಿ ಬಿದ್ದ ಬೃಹತ್‌ ಕಲ್ಲು ತುಂಬುತ್ತಿದ್ದ ಭಾರೀ ಉದ್ದದ ಟ್ರಕ್..! ವೀಕ್ಷಿಸಿ

ಕ್ಷಣಾರ್ಧದಲ್ಲಿ ಅನಾಹುತವೇ ನಡೆದು ಹೋಗಿದೆ. ಸಣ್ಣ ಅಜಾಗರೂಕತೆಯಿಂದಾಗಿ ಬೃಹತ್‌ ಟ್ರಕ್‌ ಪ್ರಪಾತಕ್ಕೆ ಬಿದ್ದಿದೆ. ಭಾಋಈ ಉದ್ದನೆಯ ಟ್ರಕ್‌ ಬೀಳುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು ಅದನ್ನು ಐಎಎಸ್‌ ಅಧಿಕಾರಿ ರುಪಿನ್‌ ಶರ್ಮಾ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಭಾರೀ ಉದ್ದದ ಟ್ರಕ್‌ಗೆ ಬೃಹತ್ ಬಂಡೆಯನ್ನು ತುಂಬುವಾಗ ಈ ಅನಾಹುತ ಸಂಭವಿಸಿದೆ. ಬಂಡೆಯನ್ನು ತುಂಬುತ್ತಿದ್ದಂತೆಯೇ ಒಂದು ಹಂತದಲ್ಲಿ ಸ್ವಲ್ಪ ಎಡವಟ್ಟಾಗುತ್ತದೆ. ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಟ್ರಕ್ ಉರುಳಿ ಕಂದಕಕ್ಕೆ ಬೀಳುತ್ತದೆ…! ಜೆಸಿಬಿಯ ಹ್ಯಾಂಡ್‌ ಕಲ್ಲನ್ನು ಟ್ರಕ್‌ನ ಮಧಯ ಭಾಘಕ್ಕೆ ಒಯ್ಯುವುದರ ಬದಲು ಟ್ರಕ್ನ ಮತ್ತೊಂದು ಪಕ್ಕಕ್ಕೆ ಒಯ್ದಿದೆ. ಇದು ಅನಾಹುತಕ್ಕೆ ಕಾರಣವಾಗಿದೆ.

https://twitter.com/rupin1992/status/1461708017653723142?ref_src=twsrc%5Etfw%7Ctwcamp%5Etweetembed%7Ctwterm%5E1461708017653723142%7Ctwgr%5E%7Ctwcon%5Es1_&ref_url=https%3A%2F%2Fvijaykarnataka.com%2Fviral-adda%2Fomg-news%2Fshocking-video-of-a-truck-topples-while-loading-huge-rock-is-going-viral-on-social-media%2Farticleshow%2F87812431.cms

ಬಂಡೆಯ ಒಂದು ಬದಿಯ ಭಾರಕ್ಕೆ ನಿಯಂತ್ರಣ ಕಳೆದುಕೊಳ್ಳುವ ತಗ್ಗಿನಲ್ಲಿ ಟ್ರಕ್ ಉರುಳಿ ಬೀಳುವಾಗ ವಿಡಿಯೋ ನೋಡುವವರಿಗೆ ಎದೆ ಝಲ್‌ ಎನ್ನುತ್ತದೆ. ಇನ್ನು ಅಲ್ಲಿದ್ದವರಿಗೆ ಹೇಗಾಗಿರಬೇಡ.

ನಿಮ್ಮ ಕಾಮೆಂಟ್ ಬರೆಯಿರಿ

advertisement