ಕೇಂದ್ರದಿಂದ ಕರ್ನಾಟಕಕ್ಕೆ 3467.62 ಕೋಟಿ ರೂ. ತೆರಿಗೆ ಹಣ ಬಿಡುಗಡೆ

ನವದೆಹಲಿ: ಕೇಂದ್ರ ಸರ್ಕಾರದಿಂದ ರಾಜ್ಯಗಳ ಪಾಲಿನ ತೆರಿಗೆ ಹಣದ ಕಂತನ್ನು ಇಂದು (ಮಂಗಳವಾರ) ಬಿಡುಗಡೆ ಮಾಡಲಾಗಿದ್ದು, ಎಲ್ಲ ರಾಜ್ಯಗಳಿಗೆ ಸೇರಿ ಒಟ್ಟು 95,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯಕ್ಕೆ 3,467.62 ಕೋಟಿ ರೂ. ದೊರೆತಿದೆ.
ಕೇಂದ್ರ ಹಣಕಾಸು ಇಲಾಖೆಯಿಂದ ಎರಡು ಕಂತಿನ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಿರುವ ಕಾರಣ ದೊಡ್ಡ ಪ್ರಮಾಣದಲ್ಲಿ ಹಣ ಬಿಡುಗಡೆಯಾಗಿದೆ.ಉತ್ತರ ಪ್ರದೇಶಕ್ಕೆ 17056.66 ಕೋಟಿ ರೂ ಬಿಡುಗಡೆ ಮಾಡುವ ಮೂಲಕ ಸಿಂಹಪಾಲು ನೀಡಿದೆ.
ಕಳೆದ ವಾರ ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್​ ಸಭೆಯಲ್ಲಿ ಭಾಗಿಯಾಗಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಆ ವೇಳೆ ಎಲ್ಲ ರಾಜ್ಯಗಳಿಗೆ ತೆರಿಗೆ ಹಣ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಅದರಂತೆ ಇಂದು ಹಣ ಬಿಡುಗಡೆ ಮಾಡಲಾಗಿದೆ.
ಉತ್ತರಾಖಂಡ್​​ಗೆ 1063.02 ಕೋಟಿ ರೂ., ಮಧ್ಯಪ್ರದೇಶಕ್ಕೆ 7463.92 ಕೋಟಿ ರೂ. ಛತ್ತೀಸ್​ಘಡಕ್ಕೆ 3239.54 ಕೋಟಿ ರೂ. ಮಹಾರಾಷ್ಟ್ರಕ್ಕೆ 6006.30 ಕೋಟಿ, ಗುಜರಾತ್​ಗೆ 3306.94 ಕೋಟಿ ರೂ. ಹಾಗೂ ಗೋವಾಗೆ 367.02 ಕೋಟಿ ರೂ. ಸಿಕ್ಕಿದೆ. ಉಳಿದಂತೆ ಪಂಜಾಬ್​ಗೆ 1718.16 ಕೋಟಿ ರೂ., ಹರಿಯಾಣ 1039.24 ಕೋಟಿ ರೂ., ರಾಜಸ್ಥಾನಕ್ಕೆ 5729.64 ಕೋಟಿ ರೂ., ಹಿಮಾಚಲ ಪ್ರದೇಶಕ್ಕೆ 789.16 ಕೋಟಿ ರೂ., ಆಂಧ್ರಪ್ರದೇಶಕ್ಕೆ 3847.96 ಕೋಟಿ ರೂ., ತೆಲಂಗಾಣ 1998.62 ಕೋಟಿ ರೂ., ತಮಿಳುನಾಡಿಗೆ 3878.38 ಕೋಟಿ ರೂ., ಕರ್ನಾಟಕಕ್ಕೆ 3467.62 ಕೋಟಿ ರೂ ಹಾಗೂ ಕೇರಳಕ್ಕೆ 1830.38 ಕೋಟಿ ರೂ. ದೊರೆತಿದೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement