ಮದುವೆ ಮೆರವಣಿಗೆಯಲ್ಲಿ ಹಾಕಿದ ಜೋರಾದ ಡಿಜೆ ಸೌಂಡ್ಸ್ ಅಬ್ಬರಕ್ಕೆ ಹೆದರಿ ಹೃದಯಾಘಾತಕ್ಕೆ ನನ್ನ 63 ಕೋಳಿಗಳು ಸಾವು: ದೂರು ದಾಖಲು

ನವದೆಹಲಿ: ನೆರಮನೆಯಲ್ಲಿನ ಮದುವೆ ಸಂದರ್ಭದಲ್ಲಿ ಬಳಸಿದ ಡಿಜೆ ಸೌಂಡ್ಸ್ ಪರಿಣಾಮವಾಗಿ ತನ್ನ ಫಾರ್ಮ್ ನಲ್ಲಿನ 63 ಕೋಳಿಗಳು ಸತ್ತಿವೆ ಎಂದು ಒಡಿಶಾದ ಬಾಲಾಸೋರಿಲ್ಲಿನ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಕರದಂಗಡಿ ಗ್ರಾಮ ನಿವಾಸಿ, ಕೋಳಿ ಫಾರಂ ಮಾಲಿಕ ರಂಜಿತ್ ಪರಿದಾ ಎಂಬುವವರು ನೀಲಗಿರಿ ಪೊಲೀಸ್ ಠಾಣೆಯಲ್ಲಿ ತಮ್ಮ ನೆರೆಮನೆಯ ರಾಮಚಂದ್ರ ಪರಿದಾ ಅವರ ಮದುವೆ ಮೆರವಣಿಗೆಯಲ್ಲಿ ಜೋರಾಗಿ ಡಿಜೆ ಮ್ಯೂಸಿಕ್ ಹಾಕಿದ್ದರಿಂದ ನನ್ನ ಕೋಳಿಗಳು ಹೃದಯಾಘಾತಗೊಂಡು ಮೃತಪಟ್ಟಿವೆ ಎಂದು ಆರೋಪಿಸಿದ್ದಾರೆ
ಶನಿವಾರ 11.30ರ ಹೊತ್ತಿಗೆ ಡಿಜೆ ಬ್ಯಾಂಡ್ ಸೌಂಡ್ ನೊಂದಿಗೆ ಮದುವೆ ಮೆರವಣಿಗೆ ತಮ್ಮ ಕೋಳಿ ಫಾರ್ಮ್ ಸಮೀಪದಿಂದಲೇ ಹಾದು ಹೋಗಿತ್ತು. ಡಿಜೆ ಬ್ಯಾಂಡ್ ಫಾರ್ಮ್ ಬಳಿ ಬಂದಾಗ, ಡಿಜೆ ಅವರ ಫಾರ್ಮ್ ಸಮೀಪಿಸುತ್ತಿದ್ದಂತೆ ಕೋಳಿಗಳು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದವು. ಕೋಳಿಗಳು ಹೆದರಿ ಹಾರಲು ಆರಂಭಿಸಿದ್ದವು. ನಂತರ ದಿಢೀರನೆ ಕುಸಿದು ಬಿದ್ದು ಮೃತಪಟ್ಟಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಡಿಜೆ ಸೌಂಡ್ಸ್ ಕಡಿಮೆ ಮಾಡುವಂತೆ ನಾನು ಅವರಲ್ಲಿ ಮನವಿ ಮಾಡಿಕೊಂಡರೂ ಕೇಳಲಿಲ್ಲ. ಭಾರೀ ಶಬ್ದದ ಪರಿಣಾಮ 63 ಕೋಳಿಗಳು ಹೃದಯಾಘಾತದಿಂದ ಸತ್ತಿವೆ ಎಂದು ರಂಜಿತ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಕೋಳಿಗಳನ್ನು ಪರೀಕ್ಷಿಸಿದ ಪಶುವೈದ್ಯಾಧಿಕಾರಿ ಕೂಡಾ ಭಾರೀ ಶಬ್ದದ ಶಾಕ್ ನಿಂದ ಮೃತಪಟ್ಟಿದೆ ಎಂದು ತಿಳಿಸಿದ್ದಾರೆಂದು ವರದಿ ತಿಳಿಸಿದೆ.
ನೆರೆಮನೆಯ ರಾಮಚಂದ್ರನ ಬಳಿ ಪರಿಹಾರ ಕೇಳಲು ಹೋಗಿದ್ದಾಗ ಅವರು ನಿರಾಕರಿಸಿದ್ದರು. ಬೇರೆ ದಾರಿ ತೋಚದಿದ್ದಾಗ ರಂಜಿತ್ ರಾಮಚಂದ್ರನ ವಿರುದ್ಧ ನೀಲಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಂಜಿತ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಯಾವುದೇ ಉದ್ಯೋಗ ಸಿಗದ ಪರಿಣಾಮ 2019ರಲ್ಲಿ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಎರಡು ಲಕ್ಷ ರೂಪಾಯಿ ಸಾಲ ಪಡೆದು ಕೋಳಿ ಫಾರ್ಮ್ ಆರಂಭಿಸಿದ್ದ ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement