ತಮಗೆ ಕೊಟ್ಟ 75 ಲಕ್ಷ ರೂ. ವರದಕ್ಷಿಣೆ ಹಣ ಬಾಲಕಿಯರ ಹಾಸ್ಟೆಲ್‌ ನಿರ್ಮಾಣಕ್ಕೆ ದೇಣಿಗೆ ಕೊಟ್ಟ ಮದುಮಕ್ಕಳು

ಜೈಪುರ್: ಮದುವೆಯಲ್ಲಿ ವರದಕ್ಷಿಣೆ ನೀಡಿದ್ದ 75 ಲಕ್ಷ ರೂ.ಗಳಷ್ಟು ಹಣದಲ್ಲಿ ನೂತನ ಮದುಮಕ್ಕಳು ಬಾಲಕಿಯರ ವಿದ್ಯಾರ್ಥಿನಿಲಯ (ಹಾಸ್ಟೆಲ್) ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ಸಾರ್ವಜನಿಕವಾಗಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಉದ್ಯಮಿ ಕಿಶೋರ್ ಸಿಂಗ್ ಕನೋದ್ ಇದೇ 21ರಂದು ತಮ್ಮ ಮಗಳಾದ ಅಂಜಲಿ ಕನ್ವರ್ ಅವರ ವಿವಾಹ ನೆರವೇರಿಸಿದ್ದರು.

ದೈನಿಕ್ ಭಾಸ್ಕರದಲ್ಲಿ ಪ್ರಕಟವಾದ ವರದಿಯ ಪ್ರಕಾರ,ಮದುವೆ ಸಂದರ್ಭದಲ್ಲಿ, ವರ ಪ್ರವೀಣ್ ಸಿಂಗ್‍ ಅವರಿಗೆ ವರದಕ್ಷಿಣೆ ಎಂದು ಕಿಶೋರ್ ಅವರು 75 ಲಕ್ಷ ರೂ.ಗಳನ್ನು ತೆಗೆದಿರಿಸಿದ್ದರು. ಆದರೆ ಮದುವೆಯ ಮುನ್ನಾದಿನ ಅಂಜಲಿ ವರದಕ್ಷಿಣೆಗೆ ತೆಗೆದಿಟ್ಟ ಹಣವನ್ನು ಬಾಲಕಿಯರ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ನೀಡಿ ಎಂದು ತಮ್ಮ ತಂದೆಯನ್ನು ಕೇಳಿಕೊಂಡಿದ್ದಾರೆ. ಇದಕ್ಕೆ ಕಿಶೋರ್ ಸಿಂಗ್‌ ಸಮ್ಮತಿಸಿದ್ದಾರೆ.
ಮದುವೆಯ ದಿನ ಮಂಟಪದಲ್ಲಿಯೇ ಈ ಬಗ್ಗೆ ಕಿಶೋರ್ ಘೋಷಣೆ ಮಾಡಿದ್ದಾರೆ. ತಮ್ಮ ಮಗಳಿಗೆ ಖಾಲಿ ಚೆಕ್ ನೀಡಿ, ಎಷ್ಟು ದೇಣಿಗೆ ನೀಡಬೇಕೊ ಅದನ್ನು ಚೆಕ್‍ನಲ್ಲಿ ನಮೂದಿಸು ಎಂದು ಹೇಳಿದ್ದಾರೆ. ಅಂಜಲಿ ಆ ಚೆಕ್‍ನಲ್ಲಿ 75 ಲಕ್ಷ ರೂ.ಗಳನ್ನು ನಮೂದಿಸಿದ್ದಾರೆ. ಆ ಚೆಕ್ ಅನ್ನು ಬಾಲಕಿಯರಿಗೆ ಹಾಸ್ಟೇಲ್‌ ನಿರ್ಮಾಣ ಮಾಡಲು ತಾರಾತರ ಮಠದ ಮುಖ್ಯಸ್ಥರಿಗೆ ಮಂಟಪದಲ್ಲಿಯೇ ಹಸ್ತಾಂತರಿಸಲಾಯಿತು.
ನಾವು ನಿರ್ಮಿಸುತ್ತಿರುವ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಕಿಶೋರ್ ಅವರು ಈ ಮೊದಲೇ 1 ಕೋಟಿ ರೂ. ದೇಣಿಗೆ ನೀಡಿದ್ದರು. ಕಾಮಗಾರಿ ಪೂರ್ಣಗೊಳಿಸಲು ಇನ್ನೂ 50ರಿಂದ 75 ಲಕ್ಷ ರೂ.ಗಳ ಅಗತ್ಯವಿತ್ತು. ಕಿಶೋರ್ ಅವರು ಈಗ ಅದನ್ನೂ ಒದಗಿಸಿದ್ದಾರೆ ಎಂದು ತಾರಾತರ ಮಠದವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಅತ್ಯಧಿಕ ಅಪಾಯದ ಮಟ್ಟ 6ರ ವಿರುದ್ಧ ರಕ್ಷಣೆಗಾಗಿ ದೇಶದ ಅತ್ಯಂತ ಹಗುರ ಬುಲೆಟ್ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಿದ ಡಿ ಆರ್‌ ಡಿ ಒ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement