ಮಧ್ಯಪ್ರದೇಶದ ಮೊರೆನಾದಲ್ಲಿ ಹೊತ್ತಿ ಉರಿದ ಉಧಮ್‌ಪುರ-ದುರ್ಗ ಎಕ್ಸ್‌ಪ್ರೆಸ್‌; 2 ಬೋಗಿಗಳು ಸುಟ್ಟು ಕರಕಲು

ನವದೆಹಲಿ: ಮಧ್ಯಪ್ರದೇಶದ ಮೊರೆನಾ ಮತ್ತು ಧೋಲ್‌ಪುರ ನಡುವಿನ ನಿಲ್ದಾಣದ ಬಳಿ ಶುಕ್ರವಾರ ಮಧ್ಯಾಹ್ನ ಉಧಮ್‌ಪುರ ಎಕ್ಸ್‌ಪ್ರೆಸ್ ರೈಲಿನ ಎರಡು ಹವಾನಿಯಂತ್ರಿತ ಕೋಚ್‌ಗಳಿಗೆ ಬೆಂಕಿ ಕಾಣಿಸಿಕೊಂಡಿದೆ.
ಸಮಯಕ್ಕೆ ಸರಿಯಾಗಿ ಬೆಂಕಿಯನ್ನು ಹತೋಟಿಗೆ ತಂದಿದ್ದರಿಂದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ. ಮಧ್ಯಪ್ರದೇಶದ ಹೇತಾಂಪುರ ರೈಲು ನಿಲ್ದಾಣದಿಂದ ರೈಲು ಹೊರಟ ಬಳಿಕ ಈ ಘಟನೆ ನಡೆದಿದೆ. ರೈಲು ಉಧಂಪುರದಿಂದ ದುರ್ಗ್‌ಗೆ ತೆರಳುತ್ತಿತ್ತು. ಮಧ್ಯಾಹ್ನ 3.30ರ ಸುಮಾರಿಗೆ ರೈಲು ಹೇತಾಂಪುರ ನಿಲ್ದಾಣದ ಬಳಿ ಇದ್ದಾಗ ಎ1 ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎ2 ಕೋಚ್‌ಗೆ ವ್ಯಾಪಿಸಿದೆ. ತಕ್ಷಣವೇ ರೈಲನ್ನು ನಿಲ್ಲಿಸಲಾಯಿತು.
ಪ್ರಯಾಣಿಕರು ಕಿಟಕಿ ಗಾಜುಗಳನ್ನು ಒಡೆದು ಹೊರಗೆ ಬರುವಲ್ಲಿ ಯಶಸ್ವಿಯಾದರು ಎಂದು ಸ್ಥಳೀಯ ಸರಾಯಿಚೋಳ ಪೊಲೀಸ್ ಠಾಣೆ ಪ್ರಭಾರಿ ರಿಷಿಕೇಶ್ ಶರ್ಮಾ ತಿಳಿಸಿದ್ದಾರೆ.
ಉದಮ್‌ಪುರ-ದುರ್ಗ್ ಎಕ್ಸ್‌ಪ್ರೆಸ್‌ನ A1 ಮತ್ತು A2 ಕೋಚ್‌ಗಳು ಹೇತಾಂಪುರ ರೈಲು ನಿಲ್ದಾಣದಿಂದ ನಿರ್ಗಮಿಸಿದ ನಂತರ ಅಪರಿಚಿತ ಕಾರಣಗಳಿಂದ ಬೆಂಕಿಯನ್ನು ವರದಿ ಮಾಡಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಮತ್ತು ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ” ಎಂದು ಶರ್ಮಾ ಹೇಳಿದರು.
ರೈಲ್ವೆ ಅಧಿಕಾರಿಗಳ ಪ್ರಕಾರ ಎರಡು ಬೋಗಿಗಳಲ್ಲಿ 70ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಎರಡು ಬೋಗಿಗಳಿಂದ ಹೊಗೆ ಮತ್ತೊಂದು ಎಸಿ ಬೋಗಿ ಮತ್ತು ಜನರೇಟರ್ ವ್ಯಾನ್‌ಗೆ ಪ್ರವೇಶಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಾನಿಗೊಳಗಾದ ಬೋಗಿಗಳನ್ನು ರೈಲಿನಿಂದ ಬೇರ್ಪಡಿಸಲಾಗಿದೆ. ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸುವಲ್ಲಿ ಸ್ಥಳೀಯರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement