ಹೊಳೆಯಲ್ಲಿ ಈಜಲು ಹೋಗಿ ಮೂವರು ವಿದ್ಯಾರ್ಥಿಗಳು ನೀರುಪಾಲು

ಹೆಬ್ರಿ : ಶಿವಪುರ ಗ್ರಾಮದ ಭಟ್ರಾಡಿ ಹೊಳೆಗೆ ಈಜಲು ಹೋದ ವಿದ್ಯಾರ್ಥಿಗಳಲ್ಲಿ ಮೂವರು ನೀರುಪಾಲದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದ ಬಗ್ಗೆ ವರದಿಯಾಗಿದೆ.
ಈಜಲು ಹೋದ ಹಿರಿಯಡ್ಕ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಮೃತರನ್ನು ಸುದರ್ಶನ್ (16), ಸೋನಿತ್ (17) ಹಾಗೂ ಕಿರಣ್ (16) ಎಂದು ಗುರುತಿಸಲಾಗಿದೆ. ಸ್ಥಳೀಯರ ಸಹಕಾರದಿಂದ
ಮೂವರ ಶವಗಳನ್ನು ಮೇಲಕ್ಕೆತ್ತಲಾಗಿದ್ದು, ಸ್ಥಳಕ್ಕೆ ಹೆಬ್ರಿ ಠಾಣೆಯ ಪೊಲೀಸರು, ತಹಶೀಲ್ದಾರ್ ಅವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಒಟ್ಟು 12 ವಿದ್ಯಾರ್ಥಿಗಳು ಕಾಲೇಜಿಗೆಂದು ಮನೆಯಿಂದ ಹೊರಟವರು ಕಾಲೇಜಿಗೆ ಹೋಗದೆ ಈಜಲೆಂದು ಹೊಳೆಗೆ ಹೋಗಿದ್ದರು. ಆಳವಾದ ಪ್ರದೇಶದಲಿ ಸ್ಥಾನಕ್ಕೆ ಇಳಿದವರು ನಿಯಂತ್ರಣ ಕಳೆದುಕೊಂಡಿದ್ದು ಮೂವರು ನೀರುಪಾಲಾಗಿದ್ದಾರೆ.

0 / 5. 0

ಪ್ರಮುಖ ಸುದ್ದಿ :-   ಏಪ್ರಿಲ್‌ 28, 29 ರಂದು ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ : ಬೆಳಗಾವಿಯಲ್ಲಿ ತಂಗುವ ಸಾಧ್ಯತೆ

ನಿಮ್ಮ ಕಾಮೆಂಟ್ ಬರೆಯಿರಿ

advertisement