ಮಾನನಷ್ಟ ಮೊಕದ್ದಮೆ: ಏಕ ಸದಸ್ಯ ಪೀಠದ ಆದೇಶ ರದ್ದುಗೊಳಿಸುವ ಮಲಿಕ್ ಪ್ರಸ್ತಾವನೆಗೆ ಧ್ಯಾನದೇವ ವಾಂಖೆಡೆ ತಂದೆ ಒಪ್ಪಿಗೆ

ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ತಂದೆ ಧ್ಯಾನದೇವ್ ವಾಂಖೆಡೆ ಅವರಿಗೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿರುವ ಏಕಸದಸ್ಯ ಪೀಠದ ಆದೇಶ ರದ್ದುಗೊಳಿಸಲು ಮಲಿಕ್‌ ಮನವಿ ಮಾಡಿದ್ದು ಇದಕ್ಕೆ ತಮ್ಮ ಅಭ್ಯಂತರ ಇಲ್ಲ ಎಂದು ಧ್ಯಾನದೇವ್‌ ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ತಿಳಿಸಿದ್ದಾರೆ.
ಧ್ಯಾನದೇವ್ ಅವರಿಗೆ ಮಧ್ಯಂತರ ಪರಿಹಾರ ನೀಡಲು ಏಕಸದಸ್ಯ ಪೀಠ ನಿರಾಕರಿಸಿತ್ತು. ಆದರೆ ಸಚಿವ ಮಲಿಕ್‌ ವಿರುದ್ಧ ಅನೇಕ ಪ್ರತಿಕೂಲ ಅಭಿಪ್ರಾಯ ವ್ಯಕ್ತಪಡಿಸಿದ್ದ ಆದೇಶ ರದ್ದುಗೊಳಿಸಲು ಅವರು ಕೋರಿದ್ದರು. ಆದೇಶ ರದ್ದುಗೊಳಿಸಿದ ಬಳಿಕ ಮೊಕದ್ದಮೆಯಲ್ಲಿನ ಮಧ್ಯಂತರ ಅರ್ಜಿಯನ್ನು ಪ್ರಕರಣದ ಮರುವಿಚಾರಣೆಗಾಗಿ ಏಕಸದಸ್ಯ ಪೀಠಕ್ಕೆ ಮರಳಿಸಬಹುದು ಎಂದು ಸಲಹೆ ನೀಡಿದ್ದರು. ಧ್ಯಾನದೇವ್‌ ಅವರು ಅದಕ್ಕೆ ಸಮ್ಮತಿಸಿರುವುದರಿಂದ, ಮಾನನಷ್ಟ ಮೊಕದ್ದಮೆಯನ್ನು ಈಗ ಮಧ್ಯಂತರ ಪರಿಹಾರದ ಅಂಶದ ಮೇಲೆ ಏಕ ಸದಸ್ಯ ಪೀಠ ಮರುವಿಚಾರಣೆ ನಡೆಸಲಿದೆ.
ಏಕಸದಸ್ಯ ಪೀಠದ ಆದೇಶವನ್ನು ಸರ್ವಾನುತದಿಂದ ರದ್ದುಗೊಳಿಸಲಾಗಿದೆ ಎಂದು ವಾಂಖೆಡೆ ಅವರ ವಾದ ಪರಿಗಣಿಸಿ, ನ್ಯಾಯಮೂರ್ತಿ ಎಸ್‌ ಜೆ ಕಥಾವಲ್ಲಾ ಮತ್ತು ಮಿಲಿಂದ್ ಜಾಧವ್ ಅವರಿದ್ದ ವಿಭಾಗೀಯ ಪೀಠ ತನ್ನ ಆದೇಶದಲ್ಲಿ ದಾಖಲಿಸಿದೆ. ವಾಂಖೆಡೆ ಅವರ ಮಾನನಷ್ಟ ಮೊಕದ್ದಮೆಯ ಮಧ್ಯಂತರ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಪೀಠ ಡಿಸೆಂಬರ್ 9ರವರೆಗೆ ಮಲಿಕ್‌ ಅವರಿಗೆ ಸಮಯಾವಕಾಶ ನೀಡಿತು. ವಾಂಖೆಡೆ ಅವರು ಜನವರಿ 3, 2021ರೊಳಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕಿದೆ. ನಂತರ ಮುಂದಿನ 12 ವಾರಗಳ ಕಾಲ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ಮೊದಲೇ ಒಪ್ಪಿರುವಂತೆ ಮಲಿಕ್‌ ಅವರು ಸಮೀರ್‌ ಕುಟುಂಬದ ವಿರುದ್ಧ ಯಾವುದೇ ಹೇಳಿಕೆ ನೀಡದೆ ಇರಬೇಕಾಗುತ್ತದೆ.

ಪ್ರಮುಖ ಸುದ್ದಿ :-   'ಐಸ್‌ಕ್ರೀಂ ಮ್ಯಾನ್‌' ಖ್ಯಾತಿಯ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ ಕಾಮತ್ ನಿಧನ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement