ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಈಗ ಜಗತ್ತಿನ ೧೫ ದೇಶಗಳಿಗೆ ಹಬ್ಬಿದ ಕೋವಿಡ್ ಹೊಸ ರೂಪಾಂತರ ಓಮಿಕ್ರಾನ್ ಜಾಗತಿಕವಾಗಿ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಜನ ಲಸಿಕೆ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ದೇಶದಲ್ಲಿ ಕೊರೊನಾ ಎರಡನೇ ಅಲೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಇನ್ನು ಕೊರೊನಾ ಕಾಲ ಮುಗಿದೇ ಹೋಯಿತು ಎಂದು ಅಂದುಕೊಂಡವರಿಗೆ ಇದೀಗ ಕೊರೊನಾ ಹೊಸ ರೂಪಾಂತರ ತಳಿ ಓಮಿಕ್ರಾನ್ ಆತಂಕಕ್ಕೆ ಕಾರಣವಾಗಿದೆ.
ಓಮಿಕ್ರಾನ್ ರೂಪಾಂತರಿ ವೈರಸ್ ನಿಧಾನವಾಗಿ ೧೫ ದೇಶಗಳಲ್ಲಿ ಕಾಣಿಸಿಕೊಂಡಿದೆ.
ಈಗ ಭಾರತವೂ ಹೈ ಅಲರ್ಟ್ ಆಗಿದ್ದು ನಮ್ಮ ದೇಶಕ್ಕೆ ಈ ರೂಪಾಂತರಿ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಇದರಿಂದ ಮೂರನೇ ಅಲೆ ಉಲ್ಬಣ ಆಗುವ ಸಾಧ್ಯತೆ ಇದ್ದು, ಹೀಗಾಗಿ ಸರ್ಕಾರಗಳು ಕಟ್ಟೆಚ್ಚರ ವಹಿಸಿವೆ. ಕೊರೊನಾ ತಡೆಗೆ ವ್ಯಾಕ್ಸಿನ್ ಬಹಳ ಪ್ರಮುಖ ಅಸ್ತ್ರ. ಈಗ ಓಮ್ರಿಕಾನ್ ಬಗ್ಗೆ ಜಾಗತಿಕವಾಗಿ ಕಳವಳ ವ್ಯಕ್ತವಾದ ಬೆನ್ನಲ್ಲೇ ಇಷ್ಟು ದಿನ ಖಾಲಿಯಾಗಿದ್ದ ವ್ಯಾಕ್ಸಿನ್ ಸೆಂಟರ್‌ಗಳು ಈಗ ಭರ್ತಿಯಾಗಲು ಆರಂಭಸಿವೆ. ಜನ ವ್ಯಾಕ್ಸಿನ್ ಪಡೆಯಲು ಕ್ಯೂ ನಿಂತು ಕಾಯುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ