ಓಮಿಕ್ರಾನ್ ರೂಪಾಂತರವು ಆರ್‌ಟಿ-ಪಿಸಿಆರ್‌, ರಾಟ್‌ ಪರೀಕ್ಷೆಯಿಂದ ತಪ್ಪಿಸಿಕೊಳ್ಳುವುದಿಲ್ಲ ಎಂದ ಕೇಂದ್ರ : ಪರೀಕ್ಷೆ ಹೆಚ್ಚಿಸಲು ರಾಜ್ಯಗಳಿಗೆ ಸೂಚನೆ

ನವದೆಹಲಿ: ಕೋವಿಡ್ -19ರ ಓಮಿಕ್ರಾನ್‌ ರೂಪಾಂತರವು ಆರ್‌ಟಿ-ಪಿಸಿಆರ್‌ (RT-PCR) ಮತ್ತು ರಾಟ್‌ (RAT) ಪರೀಕ್ಷೆಗಳಿಂದ ತಪ್ಪಿಸಿಕೊಳ್ಳುವುದಿಲ್ಲ ಎಂದು ಮಂಗಳವಾರ ಹೇಳಿರುವ ಕೇಂದ್ರ ಸರ್ಕಾರವು ಪರೀಕ್ಷೆ ಹೆಚ್ಚಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.
ದೇಶದಲ್ಲಿ ಹೊಸ ರೂಪಾಂತರದ ಯಾವುದೇ ಪ್ರಕರಣ ಕಂಡುಬಂದಿಲ್ಲವಾದರೂ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಣ್ಗಾವಲು ಕೈಗೊಳ್ಳುವಂತೆ ಸರ್ಕಾರವು ರಾಜ್ಯಗಳಿಗೆ ಸೂಚಿಸಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಮಂಗಳವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಉನ್ನತ ಮಟ್ಟದ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋವಿಡ್ -19 ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆ ಕ್ರಮಗಳು ಮತ್ತು ದೇಶಾದ್ಯಂತ ವರದಿಯಾಗುತ್ತಿರುವ ಹೊಸ ರೂಪಾಂತರದ ಪ್ರಕರಣಗಳ ನಡುವೆ ಸಿದ್ಧತೆಗಳನ್ನು ಪರಿಶೀಲಿಸಿದರು.
ಕೇಂದ್ರ ಆರೋಗ್ಯ ಸಚಿವಾಲಯದ ಪರಿಷ್ಕೃತ ಮಾರ್ಗಸೂಚಿಗಳು ಮತ್ತು ಅಂತಾರಾಷ್ಟ್ರೀಯ ಪ್ರಯಾಣ ಸಲಹೆಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಪುನರುಚ್ಚರಿಸಿದ ಭೂಷಣ್, ಬಂದರುಗಳು ಮತ್ತು ಭೂ-ಗಡಿ ದಾಟುವಿಕೆಗಳ ಮೂಲಕ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲು ರಾಜ್ಯಗಳಿಗೆ ಸಲಹೆ ನೀಡಿದರು. ಹಾಟ್‌ಸ್ಪಾಟ್‌ಗಳನ್ನು ಮೇಲ್ವಿಚಾರಣೆ ಮಾಡಲು ರಾಜ್ಯಗಳನ್ನು ಸಹ ಕೇಳಲಾಗಿದೆ ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.
ಅಲ್ಲದೆ, ಕೋವಿಡ್ -19 ವಿರುದ್ಧ ಪ್ರಬಲವಾದ ರಕ್ಷಣೆಯಾಗಿ ವ್ಯಾಕ್ಸಿನೇಷನ್ ನಿರ್ಣಾಯಕ ಪಾತ್ರವನ್ನು ಗಮನಿಸಿ, ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ ವಿಕೆ ಪಾಲ್ ಅವರು ‘ಹರ್ ಘರ್ ದಸ್ತಕ್’ ಲಸಿಕೆ ಅಭಿಯಾನವನ್ನು ಡಿಸೆಂಬರ್ 31 ರ ವರೆಗೆ 100 ಪ್ರತಿಶತ ಮೊದಲ ಡೋಸ್ ಅನ್ನು ಕೇಂದ್ರೀಕರಿಸಿ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.
ವ್ಯಾಪ್ತಿ ಮತ್ತು ಎರಡನೇ ಡೋಸ್ ವ್ಯಾಕ್ಸಿನೇಷನ್ ಬ್ಯಾಕ್‌ಲಾಗ್ ಅನ್ನು ಪೂರ್ಣಗೊಳಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.
ಹೊಸ ಕೋವಿಡ್ -19 ರೂಪಾಂತರದ ಓಮಿಕ್ರಾನ್‌ನ ಯಾವುದೇ ಪ್ರಕರಣವನ್ನು ಭಾರತ ಇಲ್ಲಿಯವರೆಗೆ ವರದಿ ಮಾಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದರು, ಅದು ದೇಶವನ್ನು ತಲುಪದಂತೆ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಜಾಗತಿಕವಾಗಿ ಬೆಳವಣಿಗೆಗಳನ್ನು ಗಮನಿಸಿದ ನಂತರ ಕೇಂದ್ರವು ಸಲಹೆಯನ್ನು ನೀಡಿದೆ ಮತ್ತು ಬಂದರುಗಳಲ್ಲಿ ಹಾಗೂ ವಿಮಾನ ನಿಲ್ದಾಣಗಳಲ್ಲಿ ತೀವ್ರ ನಿಗಾ ಇರಿಸಿದೆ, ಶಂಕಿತ ಪ್ರಕರಣಗಳ ಜೀನೋಮ್ ಅನುಕ್ರಮವನ್ನು ಸಹ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸಚಿವರು, “ಈಗ 14 ದೇಶಗಳಲ್ಲಿ ಓಮಿಕ್ರಾನ್ ರೂಪಾಂತರ ಕಂಡುಬಂದಿದೆ. ಭಾರತದಲ್ಲಿ ವರದಿಯಾಗದಿದ್ದರೂ ಈ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ ಹಾಗೂ ಮೆನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಭೂಷಣ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಪರಿಣಾಮಕಾರಿ ಕಣ್ಗಾವಲು ಕೈಗೊಳ್ಳುವಂತೆ ರಾಜ್ಯಗಳಿಗೆ ವಿಶೇಷವಾಗಿ ಸೂಚಿಸಲಾಯಿತು.
ಅಪಾಯದಲ್ಲಿರುವ” ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಸ್ಯಾಂಪಲ್‌ಗಳ ಪರೀಕ್ಷೆಯನ್ನು ಮೊದಲನೇ ದಿನ ಮತ್ತು ಮತ್ತೆ ಎಂಟನೇ ದಿನದಂದು ನಿಗದಿತ ವರ್ಗದ ಪ್ರಯಾಣಿಕರ ಮಾದರಿಗಳ ಪರೀಕ್ಷೆಯನ್ನು ಸೂಕ್ಷ್ಮವಾಗಿ ಮಾಡಬೇಕಾಗಿದೆ ಎಂದು ಭೂಷಣ್ ಒತ್ತಿ ಹೇಳಿದರು.
ಆರ್‌ಟಿ-ಪಿಸಿಆರ್ ಪರೀಕ್ಷೆಯ ವರದಿ ಲಭ್ಯವಾಗುವವರೆಗೆ “ಅಪಾಯದಲ್ಲಿರುವ” ದೇಶಗಳ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲಿಗೆಸಿದ್ಧರಾಗಲು ಸಲಹೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಅಕ್ರಮ ಹಣ ವರ್ಗಾವಣೆ ಪ್ರಕರಣ : ಕೇಜ್ರಿವಾಲಗೆ ದೆಹಲಿ ಹೈಕೋರ್ಟ್‌ ನಿಂದ ಸಿಗದ ಜಾಮೀನು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement