ಮಲ್ಯ ನ್ಯಾಯಾಂಗ ನಿಂದನೆ: ಜನವರಿ 18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ನವದೆಹಲಿ: ಬ್ಯಾಂಕ್‌ಗಳಿಗೆ ವಂಚಿಸಿ ಬ್ರಿಟನ್ನಿನಲ್ಲಿರುವ ಉದ್ಯಮಿ ವಿಜಯ ಮಲ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಮುಂದುವರಿಸಲು ಸುಪ್ರೀಂಕೋರ್ಟ್‌ ನಿರ್ಧರಿಸಿದೆ.ಜನವರಿ 18ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ನ್ಯಾಯಪೀಠ ಮಂಗಳವಾರ ಪ್ರಕಟಿಸಿದೆ.
ಅವರು ಬ್ರಿಟನ್ನಿನಿಂದ ಗಡಿಪಾರು ಆಗುವವರೆಗೆ ಕಾಯಲು ಅಸಾಧ್ಯ ಎಂದೂ ಪೀಠ ಹೇಳಿದೆ. 40 ಮಿಲಿಯ ಅಮೆರಿಕನ್‌ ಡಾಲರ್‌ ಮೊತ್ತವನ್ನು ಕೋರ್ಟ್‌ ಆದೇಶದ ಹೊರತಾಗಿಯೂ ಮಕ್ಕಳ ಹೆಸರಿಗೆ ವರ್ಗಾಯಿಸಿದ ಪ್ರಕರಣ ಇದಾಗಿದೆ.
ಸುಪ್ರೀಂಕೋರ್ಟ್‍ನಲ್ಲಿ ಮಂಗಳವಾರ ವಿಜಯ್ ಮಲ್ಯ ನ್ಯಾಯಾಂಗ ನಿಂದನ ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ಮಲ್ಯ ಅವರಿಗಿದ್ದ ಎಲ್ಲ ಮೇಲ್ಮನವಿ ಸಲ್ಲಿಸುವ ಎಲ್ಲ ಮಾರ್ಗಗಳು ಈಗಾಗಲೇ ಮುಗಿದಿದೆ. ಆದರೂ ಕೆಲವು ‘ಗೌಪ್ಯ ಪ್ರಕ್ರಿಯೆಗಳು’ ಬಾಕಿ ಉಳಿದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತು.
ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವವರೆಗೆ ನಾವು ಕಾಯಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಾಲಯ ಮುಂದಿನ ಹಾಗೂ ಕೊನೆಯ ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಲಾಗುವುದು. ಶಿಕ್ಷೆ ವಿಧಿಸಲು ನಾವು ಸಿದ್ಧ ಎಂದು ತಿಳಿಸಿತು. ಈ ವೇಳೆ ಮಲ್ಯ ಹಾಜರಾಗದೇ ಇದ್ದರೂ ವಿಚಾರಣೆ ನಡೆಯುತ್ತದೆ ಎಂದು ಹೇಳಿದೆ.
2017ರಲ್ಲಿ ಸುಪ್ರೀಂಕೋರ್ಟ್‌ ಈ ಬೆಳವಣಿಗೆ ನ್ಯಾಯಾಂಗ ನಿಂದನೆ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟಿತ್ತು.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement