ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್​ಗಳ ಬೆಲೆ 100 ರೂಪಾಯಿ ಏರಿಕೆ

ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಇಂದು (ಡಿಸೆಂಬರ್ 1, 2021) ಮತ್ತೆ ಹೆಚ್ಚಿಸಲಾಗಿದೆ. 19 ಕೇಜಿಯ ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನು ತಲಾ 100 ರೂಪಾಯಿ ಹೆಚ್ಚಳ ಮಾಡಲಾಗಿದೆ. ನವೆಂಬರ್ 1ರಂದು ಬೆಲೆ ಏರಿಕೆ ಮಾಡಿದ ನಂತರ ಇದು ಎರಡನೇ ಹೆಚ್ಚಳವಾಗಿದೆ.
ಬೆಲೆ ಹೆಚ್ಚಳದ ನಂತರ 19 ಕೇಜಿಯ ವಾಣಿಜ್ಯ ಸಿಲಿಂಡರ್ ಈಗ ದೆಹಲಿಯಲ್ಲಿ 2101 ರೂಪಾಯಿ., ಮುಂಬೈನಲ್ಲಿ 2,051 ರೂ., ಕೋಲ್ಕತ್ತಾದಲ್ಲಿ 2,174.50 ರೂ., ಚೆನ್ನೈನಲ್ಲಿ ಎಲ್‌ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,234.50 ಆಗಿದೆ.
ಈ ಮಧ್ಯೆ, ಸಬ್ಸಿಡಿ ರಹಿತ 14.2 ಕೇಜಿ ಅಡುಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 899.50 ರೂ, ಕೋಲ್ಕತ್ತಾದಲ್ಲಿ 926 ರೂ, ಮುಂಬೈನಲ್ಲಿ 899.50 ರೂ. ಮತ್ತು ಚೆನ್ನೈನಲ್ಲಿ ಪ್ರತಿ ಸಿಲಿಂಡರ್‌ಗೆ ರೂ. 915.50, ಬೆಂಗಳೂರಿನಲ್ಲಿ 902.50 ರೂಪಾಯಿ ಆಗಿದೆ.
14.2 ಕೆಜಿ ಗೃಹೋಪಯೋಗಿ ಸಿಲಿಂಡರ್ ಮತ್ತು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಗಳ ನಡುವಿನ ವ್ಯತ್ಯಾಸವನ್ನು ಹೆಚ್ಚಿಸಲಾಗಿದೆ. ಪ್ರಸ್ತುತ, ರಾಷ್ಟ್ರ ರಾಜಧಾನಿಯಲ್ಲಿ 14.2 ಕೆಜಿ ಗೃಹೋಪಯೋಗಿ ಸಿಲಿಂಡರ್ ಬೆಲೆ 899.50 ರೂ ಮತ್ತು 19 ಕೆಜಿ ಸಿಲಿಂಡರ್ ವಾಣಿಜ್ಯ ಸಿಲಿಂಡರ್ ಬೆಲೆ 2,101 ರೂ.
ಈ ಭಾರಿ ಬೆಲೆ ವ್ಯತ್ಯಾಸವು 14.2 ಕೆಜಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಅನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲು ಕಾರಣವಾಗಬಹುದು ಎಂದು ಉದ್ಯಮ ತಜ್ಞರು ಹೇಳುತ್ತಾರೆ.

ಪ್ರಮುಖ ಸುದ್ದಿ :-   'ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ನಮ್ಮ ಆರ್ಥಿಕತೆ ಬೆಂಬಲಿಸಿ' : ಹದಗೆಟ್ಟ ಸಂಬಂಧಗಳ ಮಧ್ಯೆ ಭಾರತದ ಪ್ರವಾಸಿಗರಿಗೆ ಮನವಿ ಮಾಡಿದ ಮಾಲ್ಡೀವ್ಸ್ ಸರ್ಕಾರ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement