ಓಮಿಕ್ರಾನ್ ಪತ್ತೆಯಾದ ದೇಶಗಳ ಸ್ಥಿತಿ ನೋಡಿಕೊಂಡು ಸರ್ಕಾರದಿಂದ ಮುಂದಿನ ಕ್ರಮ; ಸಚಿವ ಅಶ್ವಥ್ ನಾರಾಯಣ

ಬೆಂಗಳೂರು : ರಾಜ್ಯದಲ್ಲಿ ಎರಡು ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಸೋಂಕಿತರ ಜಿನೋಮಿಕ್​ ಸೀಕ್ವೆನ್ಸ್‌​ಗೆ ಕಳುಸಲಾಗಿತ್ತು.ಅದರಲ್ಲಿ ಇಬ್ಬರಿಗೆ ಪತ್ತೆಯಾಗಿದೆ. ಓಮಿಕ್ರಾನ್ ವೈರಸ್​ ಕುರಿತು ಅಧ್ಯಯನ ಮಾಡಲಾಗಿದೆ. 11 ದೇಶಗಳ ಸ್ಥಿತಿಗತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಸಚಿವ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಓಮಿಕ್ರಾನ್​ ವೇಗವಾಗಿ ಹರಡುತ್ತದೆ. ಆದರೆ ಅದರಿಂದ ಜೀವಕ್ಕೆ ಅಪಾಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ ಒಮಿಕ್ರಾನ್​ ವೈರಸ್​ ಕುರಿತು ಸರ್ಕಾರ ಕಟ್ಟೆಚ್ಚರ ವಹಿಸಿದೆ. ಕರ್ನಾಟಕದಲ್ಲಿ ಇಬ್ಬರಿಗೆ ಪತ್ತೆಯಾಗಿದ್ದರೂ ಅವರಲ್ಲಿ ಸೋಂಕು​ ತೀವ್ರವಾಗಿಲ್ಲ. ಇಬ್ಬರನ್ನೂ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಓಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ. ಎಂದು ತಿಳಿಸಿದರು.
ಬೇರೆ ಬೇರೆ ದೇಶದಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದು, ಕೇವಲ ದೈಹಿಕವಾಗಿ ಆಮ್ಲೀಯತೆ , ಮಾಂಸ ಖಂಡ ನೋವು ಕಾಣಿಸಿಕೊಳ್ಳಲಿದೆ ಎಂದರು.
11ದೇಶಗಳ ಸ್ಥಿತಿಗತಿ ನೋಡಿಕೊಂಡು ಕ್ರಮ ತೆಗೆದುಕೊಂಡಿದ್ದೇವೆ, ವೇಗವಾಗಿ ಹರಡುತ್ತದೆ, ಆದರೆ ಜೀವಕ್ಕೆ ಅಪಾಯ ಇಲ್ಲ. ಹರಡುವ ಪ್ರಮಾಣ ವೇಗವಾಗಿದೆ. ಹೀಗಾಗಿ ಸರ್ಕಾರ ಕಟ್ಟೆಚ್ಚರ ವಹಿಸಿದೆ ಎಂದರು.
ಕಡ್ಡಾಯವಾಗಿ ತಪಾಸಣೆ ಆಗಿದ್ದರೂ,, ರಿಪೋರ್ಟ್ ಬರುವ ವರೆಗೂ ಅವರನ್ನ ಕಳುಸುವುದಿಲ್ಲ. ನೆಗೆಟೀವ್ ರಿಪೋರ್ಟ್ ಬಂದ ಬಳಿಕ ಕಳಿಸಲಾಗುವುದು ಎಂದು ತಿಳಿಸಿದರು

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

1 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement