ಕಾಂಗ್ರೆಸ್ ಮುಖಂಡ ರಾಮೋಜಿ ಗೌಡ ಕಚೇರಿ ಮೇಲೆ ಐಟಿ ದಾಳಿ

ಬೆಂಗಳೂರು: ಕಾಂಗ್ರೆಸ್ ಮುಖಂಡ ರಾಮೋಜಿಗೌಡ ಅವರ ನಿವಾಸ ಹಾಗೂ ಕಚೇರಿ ಮೇಲೆ ಐಟಿ ಅಧಿಕಾರಿಗಳು ಇಂದು,ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
15 ಜನ ಐಟಿ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ ಆಗಮಿಸಿ ಎಲ್ಲ ಸಿಬ್ಬಂದಿ ಮೊಬೈಲ್‌ ವಶಕ್ಕೆ ಪಡೆದು ಕಚೇರಿಯಲ್ಲಿನ ದಾಖಲೆಗಳನ್ನು ಪರಿಶೀಲನೆ ನಡೆಸಿದೆ.
ಕಚೇರಿಯಲ್ಲಿರುವ ಕಡತಗಳು ಹಾಗೂ ದಾಖಲೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಎಚ್‍ಎಸ್‍ಆರ್ ಬಡಾವಣೆಯಲ್ಲಿರುವ ರಾಮೋಜಿಗೌಡ ಒಡೆತನದ ಕಚೇರಿ ಮೇಲೂ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಸಿರಿ ವೈಭವ್ ಜ್ಯುವೆಲರ್ಸ್ ಶಾಪ್ ಮೇಲೂ ದಾಳಿ: ರಾಜರಾಜೇಶ್ವರಿ ನಗರದಲ್ಲಿರುವ ಸಿರಿ ವೈಭವ್ ಜ್ಯುವೆಲರ್ಸ್ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ, ರಾಜಕಾರಣಿಯಾಗಿರುವ ರಾಮೋಜಿ ಗೌಡ ಈ ಹಿಂದೆ ಪದವೀಧರರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು.

ನಿಮ್ಮ ಕಾಮೆಂಟ್ ಬರೆಯಿರಿ

advertisement