ಕಾಲೇಜಿನ ತರಗತಿಗೇ ನುಗ್ಗಿದ ಚಿರತೆ: ವಿಡಿಯೊದಲ್ಲಿ ಸೆರೆ

ನವದೆಹಲಿ: ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಚಿರತೆಯೊಂದು ಉತ್ತರ ಪ್ರದೇಶದ ಅಲಿಘರ್‌ನಲ್ಲಿರುವ ಕಾಲೇಜಿನ ತರಗತಿಯೊಂದಕ್ಕೆ ನುಗ್ಗಿದೆ. ಈ ಘಟನೆ ಚೌಧರಿ ನಿಹಾಲ್ ಸಿಂಗ್ ಇಂಟರ್ ಕಾಲೇಜಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಕಲಾನಿಧಿ ನೈತಾನಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ದೃಶ್ಯಾವಳಿಗಳು ಚಿರತೆ ತರಗತಿಯೊಳಗೆ ಅಲೆದಾಡುವುದನ್ನು ತೋರಿಸಿದೆ. ಘಟನೆಯಲ್ಲಿ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗ ಸಂಪೂರ್ಣವಾಗಿ ಆರೋಗ್ಯವಾಗಿದ್ದಾನೆ ಎಂದು ಶಾಲೆಗಳ ಜಿಲ್ಲಾ ಇನ್ಸ್‌ಪೆಕ್ಟರ್ ಧರ್ಮೇಂದ್ರ ಶರ್ಮಾ ತಿಳಿಸಿದ್ದಾರೆ.
ಅಲಿಗಢ್‌ನ ಚಾರಾ ಪ್ರದೇಶದ ಕಾಲೇಜೊಂದರಿಂದ ನಮಗೆ ಚಿರತೆಯ ಬಗ್ಗೆ ಭಯದ ಕರೆ ಬಂದ ನಂತರ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಣೆಗಾಗಿ ಧಾವಿಸಿದ್ದಾರೆ” ಎಂದು ಪೋಸ್ಟ್‌ನ ಶೀರ್ಷಿಕೆ ತಿಳಿಸಿದೆ.
ಚಿರತೆಯನ್ನು ರಕ್ಷಿಸಿ ಕಾಲೇಜು ಆವರಣದಿಂದ ಒಯ್ಯಲಾಗಿದೆ ಎಂದು ಅಧಿಕಾರಿ ಕಲಾನಿಧಿ ನೈತಾನಿ ಮಾಹಿತಿ ನೀಡಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement